ಎಪಿಎಂಸಿಗೆ ತಿದ್ದುಪಡಿ ತಂದಿರೋದು ರೈತರ ಅನುಕೂಲಕ್ಕಾಗಿ: ಎಸ್.ಟಿ.ಸೋಮಶೇಖರ

ಮೈಸೂರು: ರೈತರ ಬೆಳೆಗಳಿಗೆ ದುಪ್ಪಟ್ಟು ಹಣ ಸಿಗಬೇಕು ಎಂದು ಈ ಕಾಯ್ದೆ ತಿದ್ದುಪಡಿ ಆಗಿದೆ. ರೈತರ ಬೆಳೆಗೆ ಎಪಿಎಂಸಿ ಜೊತೆಗೆ ಹೊರಗಡೆಯ ಮಾರುಕಟ್ಟೆ ಸಿಗುತ್ತೆ. ಇದರಿಂದ ರೈತರಿಗೆ ಅನುಕೂಲ ಆಗುತ್ತೇ ವಿನಃ ಬೇರೆ ಯಾವುದೇ ಉದ್ದೇಶ ಇಲ್ಲ. ಇದು ಯಡಿಯೂರಪ್ಪ ಆಸೆ ಕೂಡ ಆಗಿತ್ತು. ಪ್ರಧಾನಿ ಮೋದಿಯವರ ಆಶಯ, ಚಿಂತನೆಯನ್ನು ರಾಜ್ಯದಲ್ಲೂ ಜಾರಿಗೊಳಿಸುತ್ತೇವೆ ಎಂದು ಚಾಮುಂಡಿ ಬೆಟ್ಟದಲ್ಲಿ ಉಸ್ತುವಾರಿ ಸಚಿವ ಎಸ್‌ಟಿ. ಸೋಮಶೇಖರ್ ಹೇಳಿದ್ದಾರೆ.
ಮೈಸೂರು ಕೊರೊನಾ ಮುಕ್ತವಾದ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟಕ್ಕೆ ಭೇಟಿ ಕೊಟ್ಟು ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ಎಸ್‌ಟಿ.ಸೋಮಶೇಖರ್. ಲಾಕ್‌ಡೌನ್ ನಿರ್ಭಂದ ಹಿನ್ನೆಲೆಯಲ್ಲಿ ದೇವಸ್ಥಾನದ ಮುಂಭಾಗವೇ ಮಂಗಳಾರತಿ ಮಾಡಿ ಹೊರಗಿನಿಂದಲೇ ದೇವರ ದರ್ಶನವನ್ನ ಸಚಿವರು ಪಡೆದರು.
ಸಂಸದ ಪ್ರತಾಪ್ ಸಿಂಹ, ಶಾಸಕರಾದ ಜಿಟಿ.ದೇವೇಗೌಡ, ರಾಮದಾಸ್, ಡಿಸಿಪಿ ಪ್ರಕಾಶ್‌ಗೌಡ, ಡಿಹೆಚ್‌ಓ ವೆಂಕಟೇಶ್ ಸೇರಿ ಹಲವರಿಂದ ತಾಯಿಗೆ ಪೂಜೆ. ಮೈಸೂರಿನಂತೆ ರಾಜ್ಯವನ್ನೂ ಕೊರೋನಾ ಮುಕ್ತ ಮಾಡುವಂತೆ ಬೇಡಿಕೊಂಡ ಸಚಿವರು.
90ಕ್ಕೆ 90 ಪ್ರಕರಣವನ್ನ ಮೈಸೂರು ಗೆದ್ದಿದೆ. ಜನ ಸದ್ಯ ನಿರಾಳ ಆಗಿದ್ದಾರೆ. ಲಾಕ್‌ಡೌನ್ ನಿಯಮದಿಂದ ನಾವೂ ಕೂಡ ದೇವಾಲಯದ ಹೊರಗೆ ದರ್ಶನ ಮಾಡಬೇಕಾಗಿದೆ. ಜನಪ್ರತಿನಿಧಿಗಳಾದ ನಾವು ಆದೇಶಗಳನ್ನು ಪಾಲಿಸಬೇಕು. ಮುಂದಿನ ದಿನಗಳಲ್ಲಿ ದೇವಸ್ಥಾನದ ಪ್ರವೇಶದ ಬಗ್ಗೆ ತೀರ್ಮಾನ ಮಾಡಲಾಗುವುದುದೆಂದು ಇದೇ ಸಮಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.