ಸಿಡಿಲಿಗೆ ಅಬ್ಬರಕ್ಕೆ ಕುಸಿದು ಬಿದ್ದು ಯುವಕನ ಸಾವು: ಶಬ್ಧಕ್ಕೆ ಬೆದರಿದ ಯುವಕ
ಉಡುಪಿ: ಕಾಪು ತಾಲೂಕಿನ ಕಟಪಾಡಿ ಏಣಗುಡ್ಡೆಯಲ್ಲಿ ಸಿಡಿಲಿನ ಶಬ್ಧದ ಅಬ್ಬರಕ್ಕೆ ದಂಗಾಗಿ ಕುಸಿದು ಬಿದ್ದು ಯುವಕನೋರ್ವ ಸಾವಿಗೀಡಾದ ದುರ್ಘಟನೆ ಸಂಭವಿಸಿದೆ.
ಕಟಪಾಡಿ ಜೆ.ಎನ್. ನಗರದ ಪಡು ಏಣಗುಡ್ಡೆ ನಿವಾಸಿ ಭರತ್ ಮೃತನಾಗಿದ್ದು, ಸಿಡಿಲು ಸಹಿತ ಮಳೆ ಬರುವಾಗ ಯುವಕ ಮನೆಯಲ್ಲಿ ಕುಳಿತಿದ್ದ. ಸಿಡಿಲು ಸಮೀಪವೇ ಬಿದ್ದ ಕಾರಣ ಯುವಕ ಸ್ಥಳದಲ್ಲಿಯೇ ಕುಸಿದು ಬಿದ್ದ. ತೀವ್ರ ಆಘಾತಗೊಂಡ ಭರತನನ್ನ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ, ಚಿಕಿತ್ಸೆ ಫಲಿಸದೇ ಯುವಕ ಕೊನೆಯುಸಿರೆಳೆದಿದ್ದಾನೆ. ಕಾಪು ಠಾಣೆಯ ಠಾಣಾಧಿಕಾರಿ ರಾಜಶೇಖರ್ ಸಾಗನೂರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.