ಕರ್ನಾಟಕದ ಸಿಂಗಂ ತಮಿಳುನಾಡಿನಲ್ಲಿ ರಾಜಕೀಯಕ್ಕೆ ಎಂಟ್ರಿ: ದಿಗ್ಗಜರಲ್ಲಿ ನಡುಕ

ಚೆನೈ: ಕರ್ನಾಟಕದ ಸಿಂಗಂ ಎಂದೇ ಖ್ಯಾತಿ ಪಡೆದಿದ್ದ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ತಮಿಳುನಾಡಿನಲ್ಲಿ ರಾಜಕೀಯ ಎಂಟ್ರಿ ಕೊಡಲಿದ್ದಾರೆಂದು ಸ್ವತಃ ಅವರೇ ಹೇಳಿಕೊಂಡಿದ್ದಾರೆ.
2021ರಲ್ಲಿ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ನಿಲ್ಲಲ್ಲು ಮುಂದಾಗಿರುವ ಅಣ್ಣಾಮಲೈ, ಇನ್ನೂ ಮೂರ್ನಾಲ್ಕು ತಿಂಗಳ ನಂತರ ರಾಜಕೀಯದಲ್ಲಿ ಮಿಂಚಲಿದ್ದಾರೆ. ತಾವೇ ಸ್ವತಃ ಫೇಸ್ ಬುಕ್ ಲೈವನಲ್ಲಿ ಬಂದು ಹೇಳಿಕೊಂಡಿರುವ ಅಣ್ಣಾಮಲೈ, ಕರ್ನಾಟಕವನ್ನ ನೆನಪಿಸಿಕೊಳ್ಳುವುದಾಗಿ ಹೇಳಿಕೊಂಡಿದ್ದಾರೆ.