ಎಪಿಎಂಸಿ ಕಾಯ್ದೆಯನ್ನ ಯುಪಿಎ ಸರಕಾರ 16ರಾಜ್ಯಗಳಲ್ಲಿ ಅನುಷ್ಠಾನ ಮಾಡಿದೆ: ಸಿ.ಟಿ.ರವಿ ಹೇಳಿಕೆ

ಬೆಂಗಳೂರು: ಎಪಿಎಂಸಿ ಕಾಯ್ದೆ ಯುಪಿಎ ಸರ್ಕಾರ ಇದ್ದಾಗಲೇ 16 ರಾಜ್ಯಗಳಲ್ಲಿ ಅನುಷ್ಠಾನಕ್ಕೆ ಬಂದಿತ್ತು. ಕೇವಲ ವಿರೋಧಿಸಬೇಕೆಂದೇ ವಿರೋಧಿಸೋದು ಸರಿಯಲ್ಲ. ಹೆಚ್ಚು ಮಾರುಕಟ್ಟೆ ಸ್ಥಾಪನೆ ಆದ್ರೆ ರೈತನಿಗೆ ಲಾಭ ಆಗುತ್ತೋ, ನಷ್ಟ ಆಗಿತ್ತೋ..? ದಲ್ಲಾಳಿ ಕೇಂದ್ರಿತ ಮಾರುಕಟ್ಟೆಗಳಾಗಿ ಪರಿವರ್ತನೆ ಆಗಿರೋದು ಸುಳ್ಳಾ..? ದಲ್ಲಾಳಿಗಳಿಗೆ ಅನುಕೂಲ ಮಾಡಿಕೊಡಲು ಸಂಚು ಮಾಡ್ತಿದ್ದಾರೆ ಎಂದು ಸಚಿವ ಸಿ.ಟಿ.ರವಿ ಹೇಳಿದರು.
ಬೆಂಗಳೂರಿನಲ್ಲಿ ಮಾತನಾಡಿದ ಸಚಿವ ರವಿ, ಎಪಿಎಂಸಿ ಕಾಯ್ದೆ ಜಾರಿಗೆ ತಂದಿರುವುದನ್ನ ಕಾಂಗ್ರೆಸ್ ವಿರೋಧ ಮಾಡುತ್ತಿರುವುದು ಹಾಸ್ಯಾಸ್ಪದವಾಗಿವೆ. ತಮ್ಮದೇ ಸರಕಾರ ಕೇಂದ್ರದಲ್ಲಿದ್ದಾಗ, ಮಾಡಿರುವ ಕಾಯ್ದೆಯನ್ನ ಉಳಿದ ರಾಜ್ಯದಲ್ಲಿ ಬಿಜೆಪಿ ಮಾಡುತ್ತಿದೆ. ಇದನ್ನ ಕಾಂಗ್ರೆಸ್ ಅರಿತುಕೊಳ್ಳಬೇಕೆಂದರು.