ಮೋದಿ ದೇಶದ ಜನರಿಗೆ ಟೋಪಿ ಹಾಕಿದ್ದಾರೆ: ಮಾಜಿ ಸಿಎಂ ಸಿದ್ದರಾಮಯ್ಯ ಟೀಕೆ

ಬೆಂಗಳೂರು: ಇದುವರೆಗೂ ಸರ್ಕಾರಕ್ಕೆ ಎಲ್ಲ ರೀತಿಯ ಬೆಂಬಲ ಕೊಟ್ಟಿದ್ದೇವೆ. ಬಹಳ ದಿನ ಅನ್ಯಾಯವನ್ನ ಸಹಿಸಿಕೊಳ್ಳಲು ಸಾಧ್ಯವಿಲ್ಲ. ರೈತರಿಗೆ, ಕಾರ್ಮಿಕರಿಗೆ, ಮಹಿಳೆಯರಿಗೆ ಅನ್ಯಾಯವಾಗುತ್ತಿದೆ. ಸಾಕಷ್ಟು ಭ್ರಷ್ಟಾಚಾರ ನಡೆಯುತ್ತಿದೆ. ಸರ್ಕಾರಕ್ಕೆ ಸಾಕಷ್ಟು ಸಲಹೆ ಕೊಟ್ಟಿದ್ದೇನೆ. ಸಿಎಂಗೆ ನಾನು 15ರಿಂದ 20 ಪತ್ರಗಳನ್ನ ಬರೆದಿದ್ದೀನೆ. ಸೌಜನ್ಯಕ್ಕಾದ್ರೂ ಒಂದೇ ಒಂದು ಉತ್ತರ ನನಗೆ ಸಿಎಂ ಯಡಿಯೂರಪ್ಪ ಕೊಟ್ಟಿಲ್ಲ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಗುಡುಗಿದ್ದಾರೆ.
ಕೊರೋನಾ ನಿಯಂತ್ರಣ ಮಾಡುವಲ್ಲಿ ಸರ್ಕಾರ ವಿಫಲವಾಗಿದೆ. ಮೊದಲು ತಬ್ಲಿಘಿಗಳಿಂದ ರೋಗ ಬಂದಿದೆ ಅಂದ್ರು. ಈಗ ಮುಂಬೈನಿಂದ ಬಂದವರಿಂದ ಬಂದಿದೆ ಅನುತ್ತಾರೆ. ನಮ್ಮ ಕಾರ್ಮಿಕರು ನಮ್ಮ ರಾಜ್ಯಕ್ಕೆ ಬರಲಿ. ಅವರನ್ನ ಮೊದಲೇ ಟೆಸ್ಟ್ ಮಾಡಿ, ಹೊರಗಿನ ಭಾಗದಲ್ಲಿ ಕ್ವಾರೆಂಟೈನ್ ಮಾಡಬೇಕಿತ್ತು. ಕೊರೋನಾ ನಿಯಂತ್ರಣ ಮಾಡುವಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದರು.
ನೆನ್ನೆ ಯ ಶಾಸಕಾಂಗ ಪಕ್ಷದ ಸಭೆಯ ನಿರ್ಣಯದಂತೆ ಇಂದು ಪ್ರತಿಭಟನೆ ಮಾಡಿದ್ದೇವೆ. 144ಸಕ್ಷನ್ ಜಾರಿಯಲ್ಲಿದೆ ಎಂದು ಪೊಲೀಸರೂ ತಿಳಿಸಿದ್ದಾರೆ. ನಮ್ಮನ್ನು ದಸ್ತಗಿರಿ ಮಾಡಿದ್ರೆ ಮಾಡ್ಲಿ. ದೇಶದ ಜನರಿಗೆ ಟೋಪಿ ಹಾಕ್ತಿದ್ದಾರೆ. ಇದನ್ನು ನೋಡಿ ಸುಮ್ಮನೆ ಕೂರಲು ಸಾಧ್ಯವಿಲ್ಲ. ವಿರೋಧ ಪಕ್ಷವಾಗಿ ಸಲಹೆ ಸೂಚನೆಗಳನ್ನು ನೀಡಿದ್ದೇವೆ. 15-20ಪತ್ರಗಳನ್ನೂ ಬರೆದಿದ್ದೇವೆ. ಅವೇನೂ ಸ್ನೇಹ ಪತ್ರಗಳಲ್ಲ, ಜನತೆಯ ಆರೋಗ್ಯ ಕುರಿತ ಪತ್ರಗಳು. ಕಾರ್ಮಿಕ ರು ರೈತರನ್ನು ಸರಿಯಾಗಿ ನೋಡಿಕೋಳ್ತಿಲ್ಲ. ಕಾರ್ಮಿಕರನ್ನು ಸರಿಯಾಗಿ ಸರ್ಕಾರ ನೋಡ್ಕೋಂಡಿದ್ರೆ, ಅವರು ರಾಜ್ಯ ಬಿಟ್ಟು ಹೋಗ್ತಿರಲಿಲ್ಲವೆಂದು ಸಿದ್ಧು ಹೇಳಿದರು.
ತಬ್ಲಿಘಿಗಳಿಂದ ಕೊರೋನ ಬಂದಿದೆ ಅಂತಿದ್ರು, ಈಗ ಮಹಾರಾಷ್ಟ್ರ ದಿಂದ ಬಂದಿದೆ ಅಂತಾರೆ. ಸರ್ಕಾರ ಏನ್ಮಾಡ್ತಿತ್ತು?. ಅವರು ಎಲ್ಲಿದ್ದಾದರೂ ಬರಲಿ. ಸರ್ಕಾರ ಕೊರೋನ ವಿಚಾರದಲ್ಲಿ ಸಂಪೂರ್ಣ ವಿಫಲವಾಗಿದೆ. ರೈತರು, ಸಾಂಪ್ರದಾಯಿಕ ಕಸುಬು ಮಾಡುವವರ ಬದುಕು ದುಸ್ತರವಾಗಿದೆ. ಅವರಿಗೂ ಈ ಸರ್ಕಾರ ಏನೂ ಮಾಡಲಿಲ್ಲ. 22 ಲಕ್ಷ ಅಸಂಘಟಿತ ಕಾರ್ಮಿಕರಿಗೆ ಸರ್ಕಾರ ಏನೂ ಮಾಡಿಲ್ಲವೆಂದು ಸಿದ್ದರಾಮಯ್ಯ ಟೀಕಿಸಿದರು.