ದಾವಣಗೆರೆಗೆ ಗುಡ್ ನ್ಯೂಸ್: ಕೊರೋನಾ ಪಾಸಿಟಿವ್ ಮತ್ತೆ ಮೂವರು ಗುಣಮುಖ

ದಾವಣಗೆರೆ: ಕೊರೊನಾ ವೈರಸ್ ನಿಂದ ತತ್ತರಿಸಿದ ದಾವಣಗೆರೆಗೆ ಗುಡ್ ನ್ಯೂಸ್. ಇಂದು ಮೂರು ಕೊರೊನಾ ಸೋಂಕಿತರು ಗುಣಮುಖರಾಗಿದ್ದು, ಮೂರು ಜನಕ್ಕೆ ಇಂದು ಬಿಡುಗಡೆಯಾಗುತ್ತಿದ್ದಾರೆಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದ್ದಾರೆ.
ದಾವಣಗೆರೆ ಜಿಲ್ಲಾ ಆಸ್ಪತ್ರೆಯಲ್ಲಿ ಈಗ 106 ಕೋವಿಡ್ ಪ್ರಕರಣಗಳಿವೆ. ಪಿ- 585, 616 ಹಾಗೂ 635 ಸಂಪೂರ್ಣ ಗುಣಮುಖರಾಗಿದ್ದಾರೆ. ಇನ್ನಷ್ಟು ಸೋಂಕಿತರು ಗುಣಮುಖರಾಗಿದ್ದು- ಬಿಡುಗಡೆ ಆಗಲಿದ್ದಾರೆ. ವರದಿ ಬಂದ ಬಳಿಕ ಕ್ರಮ ಕೈಗೊಳ್ಳಲಾಗುವುದೆಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾಹಿತಿ ನೀಡಿದ್ದಾರೆ.