ಸರಕಾರದ ಕಿಟ್ ರಾತ್ರೋರಾತ್ರಿ ಯಾರದ್ದೋ ಪಾಲು: ಕೇಳಿದವರಿಗೆ ಧಮಕಿ

ಹಾವೇರಿ: ಅಸಂಘಟಿತ ಕಾರ್ಮಿಕರಿಗೆ ಸರ್ಕಾರ ಕೊಟ್ಟಿದ್ದ ಕಿಟ್ ರಾತ್ರೋರಾತ್ರಿ ಸಾಗಿಸುತ್ತಿರುವಾಗ ಪ್ರಶ್ನೆ ಮಾಡಲು ಬಂದವರಿಗೆ ಧಮಕಿ ಹಾಕಲಾಗಿದ್ದು, ಇದಕ್ಕೆಲ್ಲಾ ಯಾರು ಉತ್ತರ ಕೊಡ್ತಾರೆ ? ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ಸರ್ಕಾರದಿಂದ ಬಂದ ಕಿಟ್ ಅನ್ನ ಸರ್ಕಾರದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ವಿತರಣೆ ಮಾಡಬೇಕು. ಅದನ್ನ ಬಿಟ್ಟು ರಾತ್ರೋರಾತ್ರಿ ಕಿಟ್ ವಿತರಣೆ ಮಾಡುವುದರೊಳಗೆ ಅರ್ಥ ಏನಿದೆ ? ಎಂದು ಸಾರ್ವಜನಿಕರ ಕೇಳುವಂತಾಗಿದೆ.
ತಡರಾತ್ರಿ ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಆಪ್ತರಿಂದ ಕಿಟ್ ದುರುಪಯೋಗ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಶಾಸಕರ ಅನುಪಸ್ಥಿತಿಯೊಳಗೆ ಶಾಸಕರ ಆಪ್ತ ಸಹಾಯಕರು ಕಿಟ್ ವಿತರಣೆ ಮಾಡಿದ್ದಾರೆ. ಕಿಟ್ ಗಳನ್ನ ತಮಗೆ ಬೇಕಾದವರಿಗೆ ಮಾತ್ರ ನೀಡಿದ್ದಾರೆನ್ನಲಾಗುತ್ತಿದೆ.
ಪ್ರತಿ ಪುರಸಭೆ ಸದಸ್ಯರಿಗೆ ಕಿಟ್ ಕೊಡೋದ್ರಲ್ಲಿ ಏನರ್ಥ..?
ತಾಲೂಕಾ ಅಧಿಕಾರಿಗಳು ಶಾಸಕರು ಅವರೇ ಪ್ರತಿಯೊಂದು ವಿಭಾಗದ ಅಸಂಘಟಿತ ಕಾರ್ಮಿಕರನ್ನು ಕರೆಸಿ ಕಿಟ್ ವಿತರಣೆ ಮಾಡಬೇಕಿತ್ತು. ಅದನ್ನ ಬಿಟ್ಟು ಬಿಜೆಪಿಯ ಪುರಸಭೆ ಸದಸ್ಯರ ಮೂಲಕ ವಿತರಣೆ ಮಾಡೋದರಲ್ಲಿ ಅರ್ಥ ಇಲ್ಲವೆಂದು ಜನ ದೂರುತ್ತಿದ್ದಾರೆ. ನಿನ್ನೆ ರಾತ್ರಿ ನಡೆದ ಗಲಾಟೆಯಿಂದ ಶಾಸಕರ ಮುಖಕ್ಕೆ ಮಸಿ ಬಳಿಯುವ ಯತ್ನ ಅವರ ಹಿಂಬಾಲಕರೇ ಮಾಡಿದ್ದಾರೆಂದು ಆರೋಪಿಸಲಾಗಿದೆ. ಅರ್ಹ ಪಲಾನುಭವಿಗಳಿಗೆ ಕಿಟ್ ವಿತರಣೆಯಲ್ಲಿ ತಾಲೂಕಾಡಳತ ವಿಫಲವಾಗಿದ್ದು, ಶಾಸಕರೇ, ದಯವಿಟ್ಟು ಎಚ್ಚೆತ್ತುಕೊಳ್ಳಿ. ಬಡವರ ಧ್ವನಿಯಾಗಿ ಎಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್.