ರೈತ ಮಹಿಳೆಗೆ ರಾಸ್ಕಲ್ ಅಂದಿದ್ದು ಸಚಿವ ಈಶ್ವರಪ್ಪನವರಿಗೆ ಗೊತ್ತೆ ಇಲ್ವಂತೆ

ಮೈಸೂರು: ರೈತ ಮಹಿಳೆ ಜೊತೆ ಸಚಿವ ಮಾಧುಸ್ವಾಮಿ ಅನುಚಿತ ವರ್ತನೆ ಮಾಡಿರುವ ಸಂಬಂಧ ಅಲ್ಲಿ ಏನು ನಡೆದಿದೆ ಅದು ನನಗೆ ಗೊತ್ತಿಲ್ಲ ಎಂದು ಮಾಧುಸ್ವಾಮಿ ವರ್ತನೆಗೆ ಪ್ರತಿಕ್ರಿಯೆ ನೀಡದೇ ಸಚಿವ ಕೆ.ಎಸ್. ಈಶ್ವರಪ್ಪ ಜಾರಿಕೊಂಡರು.
ಮೈಸೂರಿನ ಸುತ್ತೂರಿನ ಮಠಕ್ಕೆ ಭೇಟಿ ನೀಡಿದ್ದ ಈಶ್ವರಪ್ಪ, ಸಹೋದ್ಯೋಗಿ ಸಚಿವರ ನಡವಳಿಕೆ ಬಗ್ಗೆ ಪ್ರತಿಕ್ರಿಯಿಸದೆ ಹಿರಿಯ ಸಚಿವ ನಡೆದರು. ಇಡೀ ರಾಜ್ಯದಲ್ಲಿ ಮಾಧುಸ್ವಾಮಿ ಅವರ ವರ್ತನೆ ಬಗ್ಗೆ ಆಕ್ರೋಶ ಹೆಚ್ಚಾಗಿದೆ. ನಿನ್ನೆಯಿಂದಲೂ ಘಟನೆ ಸಾಕಷ್ಟು ಚರ್ಚೆಗೆ ಕಾರಣವಾಗಿದೆಯಾದರೂ, ಹಿರಿಯ ಸಚಿವರಿಗೆ ಅದು ಗೊತ್ತಿಲ್ಲವೆನ್ನುವುದು ಮಾತ್ರ ಸೋಜಿಗವೇ ಸರಿ.