ಮಾಧುಸ್ವಾಮಿ ರಾಜೀನಾಮೆ ಪಡೆಯಲು ಸಿಎಂಗೆ ಆಗ್ರಹಿಸಿದ ಡಿ.ಕೆ.ಶಿವುಕುಮಾರ
1 min readಬೆಂಗಳೂರು: ರೈತ ಮಹಿಳೆಗೆ ಸಚಿವ ಮಾಧುಸ್ವಾಮಿ ಅವಹೇಳನ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು, ಸಿಎಂ ಬಿಎಸ್ ವೈ ಇದಕ್ಕೆ ಉತ್ತರ ಕೊಡಬೇಕು. ಅವರ ಸಂಪುಟ, ಅವರ ಸಹೋದ್ಯೋಗಿ. ಅವರ ಹೇಳಿಕೆ ಬಗ್ಗೆ ಅವರೇ ಉತ್ತರ ನೀಡಬೇಕು. ಸಿಎಂ, ಮಾಧುಸ್ವಾಮಿ ರಾಜೀನಾಮೆಯನ್ನ ಪಡೆಯಬೇಕು ಎಂದು ಆಗ್ರಹಿಸಿದರು.
ಅವರ ಸಂಪುಟ ಅವರ ಸಹೋದ್ಯೋಗಿಗಳು ಅವರ ವರ್ತನೆ ಅವರ ಸಿದ್ದಾಂತ, ಅವರ ನಡವಳಿಕೆ ಇದು. ಪ್ರೈಮ್ ಮಿನಿಸ್ಟರ್ ಸ್ವಿಮಿಂಗ್ ಫುಲ್ ಹೋಗಾರ್ದು ಅಂತ ಹೇಳ್ತಾರೆ ಅವರ ಮೇಲೆ ಯಾಕೆ ನೀವು ಕೇಸ್ ಹಾಕ್ಲಿಲ್ಲ. ಅವರಿಂದ ರಾಜೀನಾಮೆ ತೆಗೆದುಕೊಂಡಿಲ್ಲ, ಇವರದ್ದು ರಾಜೀನಾಮೆ ತೆಗೆದುಕೊಂಡಿಲ್ಲ. ಅವರದ್ದು ತಪ್ಪು,ಇವರದ್ದು ತಪ್ಪು. ಇದು ಅವರಿಗೆ ಬಿಟ್ಟು ಬಿಡುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದರು.
ರಾಜೀವ್ ಗಾಂಧಿಯವರ ಸ್ಮರಣೆ
ದೇಶದ ಐಕ್ಯತೆ ಶಾಂತಿಗಾಗಿ ಪ್ರಾಣ ತ್ಯಾಗ ಮಾಡಿದ ದಿನ. ಹೊಸ ಪೀಳಿಗೆಗೆ ಕೊಟ್ಟ ಅವಕಾಶ. ಭಾರತಕ್ಕೆ ಪರಿಚಯ ಮಾಡಿಕೊಟ್ಟ ನಾಯಕನನ್ನ ನೆನಪು ಮಾಡಿಕೊಳ್ಳಲು ದಿನ. ಇದು ಕಾಂಗ್ರೆಸ್ ಕಾರ್ಯಕ್ರಮ ಅಷ್ಟೇ ಅಲ್ಲ ದೇಶದ ಕಾರ್ಯಕ್ರಮ, ಯುವಕರ ಕಾರ್ಯಕ್ರಮ. 18 ವರ್ಷ ಯುವಕರಿಗೆ ಮತ ಕೊಡವುದನ್ನ ವಿರೋಧ ಪಕ್ಷದವರು ವಿರೋಧಿಸಿದ್ರು. ಇವರು ಮತದಾನದ ಹಕ್ಕನ್ನ ನೀಡಬೇಕು ಎಂದು ಹೇಳಿದ್ದರು. ಯುವಕರಿಗೆ ಹಾಗೂ ರಾಜ್ಯದ ಜನತೆಗೆ ರಾಜಕಾರಣ ಬೆಂಗಳೂರು ನಗರದಿಂದ ಆಗಿದೆ ಎಂಬುದನ್ನ ಮರೆಯುವಂತಿಲ್ಲವೆಂದು ಇದೇ ಸಮಯದಲ್ಲಿ ಡಿಕೆಶಿ ಹೇಳಿದರು.