ಪಾಸ್ ಇಲ್ಲದೇ ಮಹಾರಾಷ್ಟ್ರದಿಂದ ಬಂದವ ಪೊಲೀಸ್ ವಶಕ್ಕೆ: ತಪಾಸಣೆಗೆ ಆಸ್ಪತ್ರೆಗೆ ರವಾನೆ

ಉತ್ತರಕನ್ನಡ: ಮಹಾರಾಷ್ಟ್ರ ದಿಂದ ಪಾಸ್ ಇಲ್ಲದೇ ಶಿರಸಿಗೆ ಬಂದಿದ್ದ ಚಾಲಕನನ್ನ ಪೊಲೀಸರ ವಶಕ್ಕೆ ಪಡೆದಿದ್ದು, ಸಹ ಚಾಲಕ ಪರಾರಿಯಾದ ಘಟನೆ ಶಿರಸಿಯ ಸಹ್ಯಾದ್ರಿ ಕಾಲೋನಿಯಲ್ಲಿ ನಡೆದಿದೆ.
ಯೋಗೀಶ್ ಪೊಲೀಸರು ವಶಕ್ಕೆ ಪಡೆದ ಚಾಲಕನಾಗಿದ್ದು, ಮಹಾರಾಷ್ಟ್ರದ ಪುಣೆಯಿಂದ ಬಂದಿದ್ದ. ಶಿರಸಿಯ ದೀವಗಿ ವಾರ್ನರ್ ಪ್ಯಾಕ್ಟರಿಗೆ ಸೇರಿದ ವಾಹನದ ಚಾಲಕನಾಗಿದ್ದು, ಕ್ವಾರಂಟೈನ ಭಯದಿಂದ ತಪ್ಪಿಸಿಕೊಂಡಿದ್ದರು. ಸಿಕ್ಕಿರುವ ಚಾಲಕನನ್ನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಕ್ವಾರಂಟೈನ್ ಮಾಡಲಾಗಿದ್ದು, ಶಿರಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.