Posts Slider

Karnataka Voice

Latest Kannada News

ಧಾರವಾಡ ಜಿಲ್ಲೆ: ಐವರು ಕೊರೋನಾ ಸೋಂಕಿತರ ಪ್ರಯಾಣ ಮಾಹಿತಿ

1 min read
Spread the love

ಧಾರವಾಡ: ಹೊರ ರಾಜ್ಯಗಳಿಂದ ಜಿಲ್ಲೆಗೆ ಆಗಮಿಸಿದ  ಐವರಲ್ಲಿ ಇಂದು ಕೊರೊನಾ ಸೋಂಕು ದೃಢಪಟ್ಟಿದ್ದು‌ ಅವರನ್ನು ಪಿ – 1505 , ಪಿ- 1506 , ಪಿ-1507 , ಪಿ – 1508 ಹಾಗೂ ಪಿ – 1509 ಎಂದು ಗುರುತಿಸಲಾಗಿದೆ. ಈ ಐದು ಜನರ  ಪ್ರಯಾಣದ ವಿವರಗಳನ್ನು ಸಾರ್ವಜನಿಕ ಮಾಹಿತಿಗಾಗಿ ಜಿಲ್ಲಾಡಳಿತ ಪ್ರಕಟಿಸಿದೆ.

ಪಿ- 1505 ಹಾಗೂ ಪಿ – 1506  ಇವರು ಹುಬ್ಬಳ್ಳಿ ಶಹರದ ಹಳೇ ಹುಬ್ಬಳ್ಳಿಯ ನಿವಾಸಿಗಳಾಗಿರುತ್ತಾರೆ. ಇವರು ದಿನಾಂಕ : 18.03.2020 ರಂದು ಹುಬ್ಬಳ್ಳಿಯಿಂದ ವಿಜಯವಾಡ ರೈಲು ಮೂಲಕ ಕರ್ನೂಲ್‌ನಲ್ಲಿಯ ತಮ್ಮ ಸಂಬಂಧಿಕರ ಮನೆಗೆ ಹೋಗಿರುತ್ತಾರೆ . ಅಲ್ಲಿ ದಿ : 17-05-2020 ರವರೆಗೆ ವಾಸವಾಗಿರುತ್ತಾರೆ . ಮೇ 17 ರ  5:00 ಗಂಟೆಗೆ  ಕುಟುಂಬದ ಒಟ್ಟು 4 ಜನ ಸದಸ್ಯರು ಸ್ಥಳೀಯ ಆಟೊ ಮೂಲಕ ಕರ್ನೂಲ್‌ನಲ್ಲಿಯ ತಮ್ಮ ಸಂಬಂಧಿಕರ ಮನೆಯಿಂದ ಹೊರಟು ಸಂಜೆ 06:30  ಕ್ಕೆ  ಅಲ್ಲಪೂರಂ ಚೌರಾಷ್ಟ್ರ ತಲುಪಿ ಅಲ್ಲಿಂದ ಬಾಡಿಗೆ ಕಾರಿನ ಮೂಲಕ ರಾಯಚೂರು , ಮಾನ್ವಿ , ಗಂಗಾವತಿ ಮಾರ್ಗವಾಗಿ ಬಂದಿದ್ದಾರೆ. ರಾಯಚೂರಿನ ಶಕ್ತಿನಗರ ಮತ್ತು ಧಾರವಾಡ ಜಿಲ್ಲೆಯ ಅಣ್ಣಿಗೇರಿ ಚೆಕ್ ಪೊಸ್ಟ್ ದಾಟಿ ದಿನಾಂಕ : 18-05-2020 ರಂದು ಮುಂಜಾನೆ 08:00  ಗಂಟೆಗೆ ಹುಬ್ಬಳ್ಳಿ ತಲುಪಿರುತ್ತಾರೆ . ದಿನಾಂಕ : 18-05-2020 ರಂದು ಮುಂಜಾನೆ 09:00 ಗಂಟೆಗೆ  ಧಾರವಾಡ ತಲುಪಿರುತ್ತಾರೆ . ಅದೇ ದಿನ ಕುಟುಂಬದ ಎಲ್ಲಾ 04 ಜನ ಸದಸ್ಯರನ್ನು ಗಂಟಲು ದ್ರವ ಪರೀಕ್ಷೆಗೊಳಪಡಿಸಿ ಕ್ವಾರಂಟೈನ್‌ನಲ್ಲಿರಿಸಲಾಗಿರುತ್ತದೆ . ದಿನಾಂಕ : 20.05.2020 ರಂದು ಪಿ – 1505 ಹಾಗೂ ಪಿ – 1506 ಇವರು ಕೋವಿಡ್ -19 ಸೊಂಕಿತರೆಂದು ದೃಢಪಟ್ಟಿದ್ದರಿಂದ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿರುತ್ತದೆ .

ಪಿ – 1507 , ಪಿ – 1508 ಹಾಗೂ ಪಿ- 1509 ಇವರ ಪ್ರಯಾಣ ವಿವರ. ಇವರು ಮಹಾರಾಷ್ಟ್ರದ ಮುಂಬಯಿ ಶಹರದ ಶಿವಾಜಿ ನಗರದ ನಿವಾಸಿಗಳಾಗಿರುತ್ತಾರೆ .  ದಿನಾಂಕ : 16-05-2020 ರಂದು ರಾತ್ರಿ 11:30 ಕ್ಕೆ  ಬಾಡಿಗೆ ಇನ್ನೊವಾ ವಾಹನ ಸಂಖ್ಯೆ : MH.04.ED.5367 ದ ಮೂಲಕ ಕುಟುಂಬದ 11 ಜನ  ಸದಸ್ಯರು ಮುಂಬೈಯಿಂದ ಹೊರಟು ದಿ : 17-05-2020 ರಂದು ರಾತ್ರಿ 8  ಗಂಟೆಗೆ ಕೊಲ್ಲಾಪುರ ಚೆಕ್ ಪೊಸ್ಟ್ ಹತ್ತಿರದಲ್ಲಿ ಊಟ

ಮಾಡಿರುತ್ತಾರೆ . ನಂತರ ರಾತ್ರಿ  11.30  ಕ್ಕೆ  ಕೊಲ್ಲಾಪುರ ಚೆಕ್ ಪೊಸ್ಟ್‌ನಿಂದ ಹೊರಟು ದಿನಾಂಕ : 18-05-2020 ರಂದು ಮುಂಜಾನೆ 05:00  ಗಂಟೆಗೆ ಧಾರವಾಡ ತಲುಪಿರುತ್ತಾರೆ . ಅದೇ ದಿನ ಕುಟುಂಬದ ಎಲ್ಲಾ 11 ಜನರನ್ನು ಗಂಟಲು ದ್ರವ ಪರೀಕ್ಷೆಗೊಳಪಡಿಸಿ ಕ್ವಾರಂಟೈನ್ ನಲ್ಲಿರಿಸಲಾಗಿರುತ್ತದೆ . ದಿನಾಂಕ : 20.05.2020 ರಂದು  ಇವರು ಕೋವಿಡ್ 19 ಸೊಂಕಿತರೆಂದು ದೃಢಪಟ್ಟಿದ್ದರಿಂದ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿರುತ್ತದೆ . ಈ ಎಲ್ಲ ಅಂಶಗಳ ಹಿನ್ನಲೆಯಲ್ಲಿ ಈ ಐದು ವ್ಯಕ್ತಿಗಳನ್ನು  ಸಂಪರ್ಕಿಸಿದ ಸಾರ್ವಜನಿಕರಿಗೆ ಕೊರೊನಾ ಸೊಂಕು ತಗಲುವ ಸಾಧ್ಯತೆ ಇದ್ದು , ಅಂತಹ  ಎಲ್ಲ ವ್ಯಕ್ತಿಗಳು ಕೂಡಲೇ ಕೊರೊನಾ ಸಹಾಯವಾಣಿ 1077 ಗೆ ಕರೆಮಾಡಿ ತಮ್ಮ ವಿವರಗಳನ್ನು ನೀಡಬೇಕು ಹಾಗೂ ಕೂಡಲೇ ಸಮೀಪದ ಸರ್ಕಾರಿ ಆಸ್ಪತ್ರೆಗೆ ಹಾಜರಾಗಿ ಪರೀಕ್ಷೆಗೆ ಒಳಪಡಬೇಕು ಎಂದು ಪ್ರಕಟಣೆ ತಿಳಿಸಿದೆ.


Spread the love

Leave a Reply

Your email address will not be published. Required fields are marked *

You may have missed