ಯೋಗೇಶಗೌಡ ಕೊಲೆ ಪ್ರಕರಣ: ಸಿಬಿಐನಿಂದ 14ಜನರ ವಿರುದ್ಧ ದೋಷಾರೋಪ ಪಟ್ಟಿ: ತನಿಖೆ ಇನ್ನೂ ಜಾರಿಯಲ್ಲಿದೆ

ಧಾರವಾಡ: ಭಾರತೀಯ ಜನತಾ ಪಕ್ಷದ ಜಿಲ್ಲಾ ಪಂಚಾಯತ್ ಸದ್ಯಸ ಯೋಗೇಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ಹಂತದ ತನಿಖೆಯನ್ನ ಸಿಬಿಐ ಪೂರ್ಣಗೊಳಿಸಿದ್ದು, 14 ಜನರ ವಿರುದ್ಧ ದೋಷಾರೋಪಣ ಪಟ್ಟಿ ಸಲ್ಲಿಸಿದ್ದಾರೆ.
ಕೊಲೆಗೆ ಸುಪಾರಿ ಪಡೆದ ಬೆಂಗಳೂರಿನ 8 ಜನ ಬಾಡಿಗೆ ಹಂತಕರು ಸೇರಿ 14 ಜನರ ವಿರುದ್ಧ ಜಾರ್ಜಶೀಟನ್ನ ಧಾರವಾಡದ ಪ್ರಿನ್ಸಿಪಲ್ ಜೆಎಂಎಫಸಿ ಕೋರ್ಟ್ ಗೆ ಸಲ್ಲಿಸಿದ್ದಾರೆ. 2016 ಜೂನ್ 15 ರಂದು ಯೋಗೇಶ್ ಗೌಡನ ಹತ್ಯೆ ನಡೆದಿತ್ತು, ಧಾರವಾಡದ ಸಪ್ತಾಪುರ ಬಾವಿಯ ಉದಯ ಜಿಮ್ ನಲ್ಲಿ ನಡೆದಿದ್ದ ಹತ್ಯೆ ಮಾಡಲಾಗಿತ್ತು. ಪೊಲೀಸರು ಪ್ರಕರಣ ದಾಖಲಿಸಿ ಜಾರ್ಜಶೀಟ್ ಸಲ್ಲಿಸಿದ ನಂತರ ಪ್ರಕರಣ ಸಿಬಿಐಗೆ ಹಸ್ತಾಂತರಗೊಂಡಿತ್ತು.
ಇನ್ನೂ ಪ್ರಕರಣದ ತನಿಖೆ ಪ್ರಗತಿಯಲ್ಲಿರುವಾಗಲೇ ದೋಷಾರೋಪಣ ಪಟ್ಟಿ ಸಲ್ಲಿಸಿರುವ ಸಿಬಿಐ ತಂಡ, ತನಿಖೆಯನ್ನ ಮತ್ತೆ ಮುಂದುವರೆಸಲಿದೆ.