ಮೊಮ್ಮಗನಿಗೆ ಸೋಂಕು: ಅಜ್ಜಿ ಕ್ವಾರಂಟೈನನಲ್ಲೇ ಆತ್ಮಹತ್ಯೆ: ಉತ್ತರಕನ್ನಡದಲ್ಲಿ ಮನ ಕಲುಕುವ ಘಟನೆ

ಉತ್ತರಕನ್ನಡ: ಕೊರೋನಾ ಸೋಂಕಿತನ ಅಜ್ಜಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ನಡೆದಿದೆ.
ಗುಜರಾತ ಸಂಪರ್ಕದ ಮೂಲಕ ದಾಂಡೇಲಿಗೆ ಆಗಮಿಸಿದ್ದ ಯುವಕನಿಗೆ ಸೋಂಕು ತಗುಲಿತ್ತು. ಸೋಂಕಿತ ಪಿ-1313 ಅಜ್ಜಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೊಮ್ಮಗನಿಗೆ ಕೊರೋನಾ ವೈರಸ್ ದೃಢಪಟ್ಟ ಹಿನ್ನೆಲೆಯಲ್ಲ ಅಜ್ಜಿಯನ್ನ ದಾಂಡೇಲಿಯಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಇದೀಗ ಕ್ವಾರಂಟೈನ್ ಕೇಂದ್ರದಲ್ಲೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪ್ರಕರಣ ದಾಂಡೇಲಿ ನಗರ ಠಾಣೆಯಲ್ಲಿ ದಾಖಲಾಗಿದೆ.