ಧಾರವಾಡ ಮತ್ತೆ ಇಬ್ಬರಿಗೆ ಕೊರೋನಾ: ಬೇರೆ ರಾಜ್ಯದವರಿಂದಲೇ ಹೆಚ್ಚಾಗುತ್ತಿದೆ ವೈರಸ್
1 min readಧಾರವಾಡ: ಹೊರ ರಾಜ್ಯದಿಂದ ಬಂದವರಿಂದ ಧಾರವಾಡ ಜಿಲ್ಲೆಯಲ್ಲಿ ಕೊರೋನಾ ಹೆಚ್ಚುತ್ತಿದೆ. ಇದುವರೆಗೂ ಮಹಾರಾಷ್ಟ್ರದಿಂದ 673 ಜನ ಬಂದಿದ್ದು, ಒಟ್ಟು 1428 ಜನ ಹೊರ ರಾಜ್ಯದಿಂದ ಬಂದಿದ್ದಾರೆ. ಇದರಲ್ಲಿ 824 ಮಂದಿ ಸ್ವ್ಯಾಬ್ ಟೆಸ್ಟಿಂಗ್ ನಡೆಸಲಾಗಿದ್ದು, ಇಂದು ಮತ್ತೆ ಜಿಲ್ಲೆಯಲ್ಲಿ ಇಬ್ಬರಿಗೆ ಕೊರೋನಾ ಸೋಂಕು ದೃಢಪಟ್ಟಿದೆ.
ನಿನ್ನೆ ಅಷ್ಟೆ 5 ಮಂದಿಗೆ ಬಂದಿದ್ದ ಕೊರೋನಾ ಸೋಂಕು ತಗುಲಿದ್ದು, ತೆಲಂಗಾಣ ಹಾಗೂ ಮಹಾರಾಷ್ಟ್ರದದಿಂದ ಬಂದಿದ್ದ 5 ಮಂದಿಗೆ ನಿನ್ನೆ ಸೊಂಕು ಪತ್ತೆಯಾಗಿತ್ತು. ದೆಹಲಿಯಿಂದ ಹಿಂತಿರುಗಿದ ಇಬ್ಬರಿಗೆ ಕೊರೋನಾ ಬಂದಿದೆ. 22 ಹಾಗೂ 23 ವರ್ಷದ ಇಬ್ಬರು ಪುರುಷರಿಗೆ ಕೊರೋನಾ ಧೃಡಪಟ್ಟಿದೆ. ಧಾರವಾಡ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 33ರಾಗಿದ್ದು, 9ಜನ ಬಿಡುಗಡೆಯಾಗಿದ್ದಾರೆ.