ಸಿಎಂ ರಾಜ್ಯದ ಸಂಕಷ್ಟ ನೋಡ್ತಿದ್ದಾರೆ: ಹಾಗಾಗಿ ನಾನೇ ಬಸ್, ಟ್ರೇನ್, ಊಟದ ವ್ಯವಷ್ಥೆ ಮಾಡ್ತೇನಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವುಕುಮಾರ ಟಾಂಗ್

ಬೆಂಗಳೂರು: ತಮ್ಮ ಊರುಗಳಿಗೆ ವಾಪಸ್ಸಾಗಲು ನೋಂದಾವಣಿಗಾಗಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಜಮಾಯಿಸಿದ್ದ ಹೊರ ರಾಜ್ಯಗಳ ವಲಸಿಗರನ್ನು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಭೇಟಿ ಮಾಡಿ ಕುಂದುಕೊರತೆಗಳನ್ನು ಆಲಿಸಿದರು.
ಇದಕ್ಕಿಂತ ಪೂರ್ವದಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ನನ್ನನ್ನ ಯಾಕ್ ನೋಡ್ತಿರಿ, ಆ ಪ್ಯಾಲೇಸ್ ಬಳಿ ಹೋಗಿ ನೋಡಿ. ನನಗೆ ಪ್ಯಾಲೇಸ್ ನಲ್ಲಿ ಇರುವ ಜನರ ಸಂಕಷ್ಟ ನೋಡುವುಕ್ಕೆ ಆಗ್ತಿಲ್ಲ. ನಾನೇ ಪ್ಯಾಲೇಸ್ ನಲ್ಲಿ ಇರುವ ಜನರಿಗೆ ಊಟ ಹಾಕಿಸುತ್ತೇನೆ. ಟ್ರೈನ್ , ಬಸ್ಸ್ ನಾನು ಬುಕ್ ಮಾಡುತ್ತೇನೆ. ಸಿಎಂ ರಾಜ್ಯದ ಸಂಕಷ್ಟದ ಕೆಲಸ ನೋಡಬೇಕು ಎಂದು ವ್ಯಂಗ್ಯವಾಡಿದ್ರು.