ಕುಮಾರಸ್ವಾಮಿ ಕ್ಷೇತ್ರಕ್ಕೂ ಕಾಲ್ಲಿಟ್ಟ ಕೊರೋನಾ: ಎರಡು ವರ್ಷದ ಮಗುವಿಗೆ ಬಂತು ಸೋಂಕು

ರಾಮನಗರ: ಗ್ರೀನ್ ಜೋನ್ ನಲ್ಲಿದ್ದ ರಾಮನಗರದಲ್ಲಿ ಮೊದಲ ಕೊರೋನಾ ಪ್ರಕರಣ ಪತ್ತೆಯಾಗಿದ್ದು, ಎರಡು ವರ್ಷದ ಗಂಡು ಮಗುವಿನಲ್ಲಿ ಸೋಕು ದೃಢಪಟ್ಟಿದೆ.
ಮಗುವನ್ನು ಬೆಂಗಳೂರು ನಗರದ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ತಮಿಳುನಾಡಿನ ಚೆನ್ನೈನಿಂದ ರಾಮನಗರಕ್ಕೆ ಕುಟುಂಬ ಆಗಮಿಸಿತ್ತು. ತಮಿಳುನಾಡಿನಲ್ಲಿ ಕೊರೋನಾ ಪ್ರಕರಣ ಹೆಚ್ಚಾದ ಹಿನ್ನಲೆಯಲ್ಲಿ ಸ್ವಗ್ರಾಮ ಮಾಗಡಿಯ ಮಾರಸಂದ್ರಕ್ಕೆ ಆಗಮಿಸಿದ್ದರು. ಸ್ವಗಾಮಕ್ಕೆ ಬಂದ ಮೇಲೆ ಕ್ವಾರಂಟೈನ್ ನಲ್ಲಿದ್ದ ಕುಟುಂಬಕ್ಕೆ ಈಗ ಆಘಾತ ಎದುರಾಗಿದೆ.