ಪೊಲೀಸ್ ಜೀಪ್ ದುರ್ಬಳಕೆ ಪ್ರಕರಣ ಪಿಎಸೈ ಅಮಾನತ್ತು: ಮತ್ತೆ ಬರ್ತಾರಂತೆ ಸಾಹೇಬ್ರು

ಹುಬ್ಬಳ್ಳಿ: ಲಾಕ್‌ಡೌನ್ ಸಮಯದಲ್ಲಿ ಇಲಾಖೆಯ ಜೀಪ್ ದುರ್ಬಳಕೆ ಮಾಡಿಕೊಂಡಿದ್ದ ಪಿಎಸೈ ಶಿವಾನಂದ ಅರೆನಾಡ ಅಮಾನತ್ತು ಮಾಡಲಾಗಿದೆ.
ಏಪ್ರೀಲ್- 17 ರಂದು ಉತ್ತರಕನ್ನಡ ಜಿಲ್ಲೆಯ ಪೊಲೀಸರಿಂದ ಪಿಎಸೈ ಕರ್ಮಕಾಂಡ ಬಯಲಾಗಿತ್ತು. ಉತ್ತರಕನ್ನಡ ಪೊಲೀಸರಿಂದ ಪ್ರಕರಣ ದಾಖಲಾದ ಮೇಲೆ ಇಲಾಖಾವಾರು ತನಿಖೆ ನಡೆಸಿ, ಅಮಾನತ್ತು ಮಾಡಲಾಗಿದೆ. ಗುತ್ತಿಗೆದಾರರೋರ್ವರ ಜೆಸಿಬಿ ತರಲು ಇಲಾಖೆ ವಾಹನದಲ್ಲಿ ಜನರನ್ನ ಕಳಿಸಿದ್ದ ಆರೋಪದ ಮೇಲೆ ನಾಲ್ವರನ್ನ ಗೋಕರ್ಣ ಪೊಲೀಸರು ಬಂಧಿಸಿದ್ದರು.
ಮತ್ತೆ ಬರುತ್ತೇನೆ
ಹುಬ್ಬಳ್ಳಿ ಅರಣ್ಯ ಘಟಕಕ್ಕೆ ಮತ್ತೆ ಪಿಎಸೈ ಆಗಿ ಬರುತ್ತೇನೆಂದು ಶಿವಾನಂದ ಅರೆನಾಡ್ ಅವಾಜ್ ಹಾಕಿದ್ದಾರಂತೆ. 2009ರ ಬ್ಯಾಚಿನ ಇವರು ಹೀಗೇಕೆ ಎನ್ನುವುದು ಅನೇಕರಲ್ಲಿ ಸೋಜಿಗ ಮೂಡಿಸಿದೆ. ಪ್ರಕರಣದ ಬಗ್ಗೆ ಮಾಹಿತಿ ನೀಡಿದವರನ್ನ ಬಿಡೋದಿಲ್ಲ ಎಂಬ ಧಮಕಿಯನ್ನ ಹಾಕಿದ್ದಾರಂತೆ ಪಿಎಸೈ ಸಾಹೇಬ್ರು. ಈ ಪ್ರಕರಣ ಬಯಲಾದ ನಂತರ ಅರಣ್ಯ ಇಲಾಖೆಯಲ್ಲಿ ನಡೆಯುತ್ತಿರುವ ಗೋಲ್ ಮಾಲ್ ಗಳು ಹೊರಬೀಳುವ ಸಾಧ್ಯತೆಯಿದೆ.