ದಾಯಾದಿಗಳ ಕಲಹ: ಮನೆಯನ್ನೇ ಫೀಸ್ ಫೀಸ್ ಮಾಡಿದ ದುರುಳರು

ತುಮಕೂರು: ಜಮೀನಿನ ವಿಚಾರಕ್ಕೆ ಸಂಬಂಧಿಸಿದಂತೆ ದಾಯಾದಿಗಳ ಕಲಹಕ್ಕೆ ಮನೆಯನ್ನೆ ಪುಡಿ ಪುಡಿ ಮಾಡಿದ ಘಟನೆ ತುಮಕೂರು ಗ್ರಾಮಾಂತರದ ನಾಗಾರ್ಜುನಹಳ್ಳಿಯಲ್ಲಿ ಸಂಭವಿಸಿದೆ.
ಮನೆಯ ನೀರಿನ ಪೈಪುಗಳು, ಸೋಲಾರ್, ಕಿಟಕಿ, ಲೈಟ್ಗಳನ್ನು ಒಡೆದು ಹಾಕಿರುವ ದಾಯಾದಿಗಳು, ಕೃಷ್ಣಯ್ಯ ಗಂಗಮ್ಮ ಕುಟುಂಬಕ್ಕೆ ಸೇರಿದ ಮೋಟರ್, ಕುರಿ, ಮೇಕೆ, ನಾಯಿಯನ್ನ ಹೊತ್ತೋಯ್ದಿದ್ದಾರೆ.
ಕೃಷ್ಣಯ್ಯ ಗಂಗಮ್ಮ ಕುಟುಂಬದ ಮನೆ ಒಡೆದು ಹಾಕಿರುವ ವಿಶ್ವನಾಥ್, ಯಶೋದಮ್ಮ, ದೊಡ್ಡರಂಗಯ್ಯ, ಮಹಾಲಕ್ಷ್ಮಿ, ರವಿ ಕುಟುಂಬ. ಊರಿಗೆ ಬಂದರೆ ಉತ್ತರಿಸುತ್ತೇನೆ ಎಂದು ಪ್ರಾಣ ಬೆದರಿಕೆ ಹಾಕಿದ್ದಾರೆ. ನ್ಯಾಯ ಕೊಡಿಸುವಂತೆ ಕೃಷ್ಣಯ್ಯ ಗಂಗಮ್ಮ ಕುಟುಂಬ ಅಂಗಲಾಚುತ್ತಿದೆ. ಇದೀಗ ಗ್ರಾಮಕ್ಕೆ ಮರಳಲು ಕೂಡಾ ಈ ಕುಟುಂಬ ಭಯ ಬಿದ್ದಿದೆ.