ವಿಕಲಚೇತನ ಸ್ವಾಮೀಜಿ ಮೇಲೆ ಪೊಲೀಸ್ ಪೌರುಷ: ಆಸ್ಪತ್ರೆಗೆ ದಾಖಲಾದ ಸ್ವಾಮೀಜಿ

ಕಲಬುರಗಿ: ಭಕ್ತರಿಂದ ಧಾನ್ಯ ಸಂಗ್ರಹಿಸಲು ಹೋಗಿದ್ದ ಸ್ವಾಮೀಜಿಗೆ ಪೊಲೀಸ್ ನೋರ್ವ ಮನಬಂದಂತೆ ಥಳಿಸಿದ ಘಟನೆ ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ಅರ್ಜುಣಗಿ ತಾಂಡಾ ಚೆಕ್ ಪೋಸ್ಟ ಬಳಿ ನಡೆದಿದೆ.
ಅಫಜಲಪುರ ತಾಲೂಕಿನ ರೇವೂರ ಶಿವಯೋಗಿ ಮಠದ ಶಿವಾನಂದ ಸ್ವಾಮೀಜಿಯ ಮೇಲೆ ರೇವೂರ ಪೊಲೀಸ್ ಠಾಣೆಯ ಶರಣಗೌಡ ಪಾಟೀಲ್ ಎಂಬ ಕಾನ್ಸಟೇಬಲ್ ಹಲ್ಲೆ ಮಾಡಿದ್ದಾನೆ. ತೀವ್ರ ಗಾಯಗೊಂಡಿರುವ ಸ್ವಾಮೀಜಿಯವರನ್ನ ಅಫಜಲಪುರ ತಾಲೂಕಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.