ಪಡಿತರ ಚೀಟಿ ಇಲ್ಲದವರಿಗೂ ಅಕ್ಕಿ-ಭೇಳೆ ವಿತರಣೆ ಚಾಲನೆ ನೀಡಿದ ಸಚಿವರು

ಬೆಂಗಳೂರು: ಇಂದಿನಿಂದ ಮೇ 30ರ ವರೆಗೆ ಪಡಿತರ ಚೀಟಿ ಇಲ್ಲದವರಿಗೆ ಸರ್ಕಾರಿ ನ್ಯಾಯ ಬೆಲೆ ಅಂಗಡಿಗಳಲ್ಲಿ ಪ್ರತಿ ಒಬ್ಬ ವ್ಯಕ್ತಿಗೆ 5ಕೆಜಿ ಅಕ್ಕಿ, 2ಕೆಜಿ ಬೇಳೆ ವಿತರಿಸಲಾಗುತ್ತಿದ್ದು, ಇಂದು ಬೆಳಿಗ್ಗೆ ಆಹಾರ ಸಚಿವ ಕೆ.ಗೋಪಾಲಯ್ಯ ಪಡಿತರ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಸಚಿವರು, ರಾಜ್ಯ ಹಾಗೂ ಹೊರ ರಾಜ್ಯದ ಕಾರ್ಮಿಕರು. ಅಂತರ್ ಜಿಲ್ಲೆಯವರು. ರೇಶನ್ ಕಾರ್ಡ್ ಹೊಂದಿದವರು ಇಂದಿನಿಂದ ಜೂನ್ ಹತ್ತರವರೆಗೆ ನ್ಯಾಯಬೆಲೆ ಅಂಗಡಿಗಳಲ್ಲಿ ಆಧಾರ್ ಕಾರ್ಡ್ ತೋರಿಸಿ ಅಕ್ಕಿ ಮತ್ತು ಬೇಳೆ ತೆಗೆದುಕೊಳ್ಳಬಹುದಾಗಿದೆ. ಕೊರೋನಾ ಸಮಸ್ಯೆ ಮುಗಿದ ಬಳಿಕ ಹೊಸದಾಗಿ ರೇಶನ ಕಾರ್ಡ್ ಗೆ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗುವುದು ಎಂದು ಸಚಿವರು ತಿಳಿಸಿದರು.