ಚಲಿಸುತ್ತಿದ್ದ ಓಮ್ನಿಗೆ ಬೆಂಕಿ: ವಾಹನದಲ್ಲಿದ್ದವರು ಪ್ರಾಣಾಪಾಯದಿಂದ ಪಾರು

ಉತ್ತರಕನ್ನಡ: ಶಿರಸಿ ನೀರ್ನಳ್ಳಿ ಕ್ರಾಸ್ ಬಳಿ ಚಲಿಸುತ್ತಿದ್ದ ಓಮ್ನಿಗೆ ಆಕಸ್ಮಿಕ ಬೆಂಕಿ ತಗುಲಿದ್ದು, ವಾಹನದಲ್ಲಿದ್ದವರು ಹೊರಗಡೆ ಬಿದ್ದು ಪ್ರಾಣವನ್ನ ಉಳಿಸಿಕೊಂಡಿದ್ದಾರೆ.
ವಿನಾಯಕ ಹೆಗಡೆ ಎನ್ನುವವರಿಗೆ ಸೇರಿದ ಓಮ್ನಿ ಸಂಪೂರ್ಣ ಸುಟ್ಟು ಕರಕಲಾಗಿದ್ದು, ವಾಹನದಲ್ಲಿದ್ದ ಮೂವರು, ಬೆಂಕಿ ಹತ್ತಿದ ತಕ್ಷಣವೇ ಹೊರಗೆ ಓಡಿ ಹೋಗಿದ್ದಾರೆ. ರಸ್ತೆ ಮಧ್ಯದಲ್ಲೇ ವಾಹನಕ್ಕೆ ಬೆಂಕಿ ತಗುಲಿದ್ದರಿಂದ ಉಳಿದ ವಾಹನ ಸವಾರರು, ಗಾಬರಿಗೊಂಡು ದೂರದಲ್ಲೇ ತಮ್ಮ ವಾಹನ ನಿಲ್ಲಿಸಿಕೊಂಡಿದ್ದಾರೆ. ನಂತರ ಅಗ್ನಿ ಶಾಮಕ ದಳದವರು ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನ ನಂದಿಸಿದ್ದಾರೆ.