Posts Slider

Karnataka Voice

Latest Kannada News

ಸಾರಿಗೆ ಇಲಾಖೆಗೆ 1800 ಕೋಟಿ ರೂಪಾಯಿ ನಷ್ಟ: ಸಚಿವ ಲಕ್ಷ್ಮಣ ಸವದಿ

1 min read
Spread the love

ಹುಬ್ಬಳ್ಳಿ: ಈಗಾಗಲೇ ರಾಜ್ಯಾಧ್ಯಂತ ಬಸ್ ಸಂಚಾರ ಮತ್ತೆ ಆರಂಭಿಸಿದ್ದೇವೆ. ನಾಲ್ಕೂ ನಿಗಮಗಳಲ್ಲಿ ಬಸ್ ಸಂಚಾರ ಆರಂಭಿಸಲಾಗಿದೆ. ಎಲ್ಲ ನಿಗಮಗಳಲ್ಲಿ ಉಂಟಾಗುತ್ತಿರುವ ನಷ್ಟ ಹಾಗೂ ಆದಾಯದ ಕುರಿತು ಪ್ರಗತಿ ಪರಿಶೀಲನೆ ನಡೆಸಿದ್ದೇವೆ. ಕೊರೋನ ಹಿನ್ನೆಲೆ 60 ದಿನಗಳ ಕಾಲ ಬಸ್ ಸಂಚಾರ ಸ್ಥಗಿತವಾಗಿತ್ತು. ಇದರಿಂದಾಗಿ ಎಲ್ಲ ನಿಗಮಗಳಿಂದ 1800 ಕೋಟಿಗೂ  ಅಧಿಕ ನಷ್ಟ ಉಂಟಾಗಿದೆ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದರು.

ನಗರದಲ್ಲಿಂದು ಅಧಿಕಾರಿಗಳ ಸಭೆ ನಡೆಸಿದ ಸಚಿವರು, ಇದರಿಂದಾಗಿ ಸಿಬ್ಬಂದಿಗೆ 320ಕೋಟಿಗೂ ಅಧಿಕ ವೇತನ ನೀಡಬೇಕಿದೆ. ಕೇಂದ್ರ ಹಾಗೂ ರಾಜ್ಯದ ಮಾರ್ಗ ಸೂಚನೆ ನೀಡಿಕೊಂಡು ಮುಂದಿನ ಕಾರ್ಯ ನಿರ್ವಹಣೆ. ಸಾರಿಗೆ ಸಂಸ್ಥೆಯಲ್ಲಿ ಒಂದು ಲಕ್ಷ ಮೂವತ್ತು ಸಾವಿರ ಜನ ಸಿಬ್ಬಂದಿಗಳಿದ್ದಾರೆ. ಏಪ್ರೀಲ್ ತಿಂಗಳವರೆಗೂ ಎಲ್ಲ ಸಿಬ್ಬಂದಿಗಳಿಗೆ ವೇತನ ನೀಡಲಾಗಿದೆ. ಮೇ ತಿಂಗಳ ಅರ್ಧ ವೇತನ ನೀಡಲಾಗಿದೆ ಇನ್ನುಳಿದ ವೇತನ ಮಾತ್ರ ಬಾಕಿ ಉಳಿದಿದೆ. ಈ ಕುರಿತು ಎಲ್ಲ ಸಮಸ್ಯೆಯ ಕುರಿತು ಸಮಾಲೋಚನೆ ನಡೆಸಲಾಗಿದೆ ಎಂದರು.

ವಾಯುವ್ಯ ಸಾರಿಗೆ ಸಂಸ್ಥೆ ಈವರೆಗೆ 414 ಕೋಟಿ ನಷ್ಟದಲ್ಲಿದೆ. ಸಂಸ್ಥೆ ಪ್ರತಿ ತಿಂಗಳು 90 ಕೋಟಿ ನಷ್ಟ ಅನುಭವಿಸುತ್ತಿದೆ. ಪ್ರತಿ ತಿಂಗಳು 96 ಕೋಟಿ ವೇತನದ ಅವಶ್ಯಕವಿದೆ. ಈಗಾಗಲೇ ಹಗಲು ಸಂಚಾರ ಆರಂಭಿಸಲಾಗಿದೆ. ಇನ್ನಷ್ಟು ದಿನ ಬಸ್ ನಲ್ಲಿ 30 ಜನರ ಪ್ರಯಾಣಕ್ಕೆ ಅವಕಾಶ. ಇನ್ನು ಕೆಲವೇ ದಿನಗಳಲ್ಲಿ ರಾತ್ರಿ ವೇಳೆ ಬಸ್ ಸಂಚಾರ ಆರಂಭಿಸುವ ಕುರಿತು ಚಿಂತನೆ ನಡೆಯುತ್ತಿದೆ. ರಾತ್ರಿ ವೇಳೆ ಸಾರ್ವಜನಿಕರು ಪ್ರಯಾಣ ಬೆಳೆಸಬಹುದು. ಈ ಕುರಿತು ಶೀಘ್ರವೇ ತೀರ್ಮಾನ ಕೈಗೊಳ್ಳಲಿದ್ದೇವೆ. ಡಿಸೇಲ್ ದರ 2014 ಕ್ಕಿಂತಲೂ ಈಗ 30 ಪ್ರತಿಶತ ಹೆಚ್ಚಾಗಿದೆ. ಪ್ರತಿವರ್ಷ ಪ್ರತಿಯೊಂದು ದರಗಳು ಹೆಚ್ಚಾಗುತ್ತದೆ. ಆದರೆ ಟಿಕೆಟ್ ದರ ಹೆಚ್ಚಾಗದೇ ಇರುವ ಕಾರಣ ಈ ಪ್ರಮಾಣದ ಹಾನಿಗೆ ಕಾರಣ. ಮುಂದಿನ ದಿನಗಳಲ್ಲಿ ಸೋರಿಕೆಯನ್ನ ತಡೆದು ಹಾನಿಯನ್ನ ಕಡಿಮೆ ಮಾಡುವ ಸಂಕಲ್ಪ ಮಾಡಿದ್ದೇವೆ ಎಂದು ಸಚಿವ ಸವದಿ ಹೇಳಿದರು.


Spread the love

Leave a Reply

Your email address will not be published. Required fields are marked *