ಕಾರ್ಮಿಕರ ಸಮಯ ಹೆಚ್ಚಳ: ಜೆಸಿಟಿಯು ಸರಕಾರದ ವಿರುದ್ಧ ಆಕ್ರೋಶ

ಹುಬ್ಬಳ್ಳಿ: ಕಾರ್ಮಿಕ ಸಂಘಟನೆಗಳ ಧಾರವಾಡ ಜಿಲ್ಲಾ ಸಮಿತಿ JCTU ಸರಕಾರದ ವಿರುದ್ಧ ಪ್ರತಿಭಟನೆ ನಡೆಸಿತು. ಬಂಡವಾಳದಾರರ ಲೂಟಿಗಾಗಿ ಕಾರ್ಮಿಕರ ಕೆಲಸದ ಅವಧಿಯನ್ನ ಹೆಚ್ಚಳ ಮಾಡಲಾಗಿದೆ ಎಂದು ಆರೋಪಿಸಿದರು.
ಜನತೆ ಹಾಗೂ ಕಾರ್ಮಿಕರ ತೀವ್ರ ವಿರೋಧದ ನಡುವೆಯೂ, ಸರ್ಕಾರವು ಕಾರ್ಖಾನೆಗಳಲ್ಲಿ ದುಡಿಯುವ ಕಾರ್ಮಿಕರ ದಿನದ ಕೆಲಸದ ಅವಧಿಯನ್ನು 8 ಗಂಟೆಯಿಂದ 10 ಗಂಟೆಗಳಿಗೆ ಮತ್ತು ವಾರದ ಕೆಲಸದ ಅವಧಿಯನ್ನು 48 ಗಂಟೆಗಳಿಂದ 60 ಗಂಟೆಗಳಿಗೆ ಹೆಚ್ಚಿಸಿದೆ. ಇದು ದುಡಿಯುವ ಜನತೆಯನ್ನು ಮತ್ತಷ್ಟು ಸಂಕಷ್ಠಕ್ಕೀಡು ಮಾಡುವ ಮತ್ತು ಬಂಡವಾಳದಾರರನ್ನು ಮಾತ್ರವೇ ಸಂಕಷ್ಟದಿಂದ ಮೇಲೆತ್ತುವ ಮತ್ತು ಅವರಿಗೆ, ಕಾರ್ಮಿಕರ ದುಡಿಮೆಯನ್ನು ಲೂಟಿ ಮಾಡಲು ಅವಕಾಶ ನೀಡಲಿದೆ. ಇದು, ರಾಜ್ಯವನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡುವ ಬದಲು ಮತ್ತಷ್ಠು ಸಂಕಷ್ಟಕ್ಕೆ ದೂಡುವ ಜವಾಬ್ದಾರಿ ಹೀನ ನಡೆಯಾಗಿದೆ. ಸರಕಾರದ ಕಾರ್ಮಿಕ ವಿರೋಧಿ ನೀತಿಯನ್ನು ವಿರೋಧಿಸಿ ಹಾಗೂ ಕಾರ್ಮಿಕರ ಕೆಲಸದ ಅವಧಿ ಹೆಚ್ಚಿಸಿ ಸರಕಾರ ಹೊರಡಿಸಿರುವ ಆದೇಶ ಪ್ರತಿಯನ್ನು ಇಂದು ಧಹಿಸಿ ಪ್ರತಿಭಟಿಸಲಾಯಿತು.
ಧಾರವಾಡ ಜಿಲ್ಲಾ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯು) ನೇತೃತ್ವದಲ್ಲಿ ಹಳೇ ಹುಬ್ಬಳ್ಳಿಯ ಎ.ಜೆ.ಮುದೋಳ ಭವನದ ಎದುರು ಸಾರ್ವಜನಿಕವಾಗಿ ಸರಕಾರದ ಆದೇಶ ಪ್ರತಿಯನ್ನು ಧಹಿಸಿ ಅಕ್ರೋಶ ವ್ಯಕ್ತಪಡಿಸಲಾಯಿತಲ್ಲದೇ ಕೂಡಲೇ ಸರಕಾರ ಕಾರ್ಮಿಕ ವಿರೋಧಿ ತೀರ್ಮಾನಗಳನ್ನು ಕೈಬಿಡಬೇಕೆಂದು ಆಗ್ರಹಿಸಲಾಯಿತು.
ಪ್ರತಿಭಟನೆಯ ನೇತೃತ್ವವನ್ನು ಕಾರ್ಮಿಕ ಮುಖಂಡ ಮಹೇಶ ಪತ್ತಾರ, ದೇವಾನಂದ ಜಗಾಪೂರ, ಬಾಬಾಜಾನ ಮುದೋಳ, ಅಶೋಕ ಬಾರ್ಕಿ, ಎನ್.ಎ.ಖಾಜಿ. ಎಂ.ಎಚ್.ಮುಲ್ಲಾ, ಬಿ.ಎ.ಮುಧೋಳ, ರಮೇಶ ಭೂಸ್ಲೆ, ಚಂದ್ರಶೇಖರ ಬೆಟಗೇರಿ, ನಸಿನೀಲ ಆಗಲಾವಿ, ಬಸೀರಹ್ಮದ ಮುಲ್ಲಾ, ಮಡಿವಾಳಗೌಡ ಪಾಟೀಲ. ಬಾಬಾಜಾನ ಬಳ್ಳಾರಿ, ಎ.ಸಿ.ಕುಲಕರ್ಣಿ ಮುಂತಾದವರು ವಹಿಸಿದ್ದರು.