ಅಕ್ಷರ ದಾಸೋಹ ಕಾರ್ಮಿಕರಿಗೆ ಸಂಬಳ ನೀಡಿ; ಹೋರಾಟಕ್ಕೀಳಿದ ಸಂಘಟನೆ

ವಿಜಯಪುರ: ಅಕ್ಷರ ದಾಸೋಹ ಕಾರ್ಮಿಕರಿಗೆ ಶಾಲೆಗಳು ಆರಂಭವಾಗುವವರಿಗೂ ಗೌರವ ಧನ ನೀಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಸಂಯುಕ್ತ ಅಕ್ಷರ ದಾಸೋಹ ಕಾರ್ಮಿಕ ಸಂಘಟನೆಯಿಂದ ಮನವಿ ಸಲ್ಲಿಸಿದರು.
ಕೊರೋನಾ ಭೀತಿಯಿಂದ ಲಾಕ್ ಡೌನ್ ಜಾರಿಯಿಂದ ಎಲ್ಲ ಶಾಲೆಗಳಿಗೆ ಸರ್ಕಾರ ರಜೆ ಘೋಷಣೆ ಮಾಡಿದ ಕಾರಣದಿಂದ ಅಕ್ಷರ ದಾಸೋಹ ಕೆಲಸ ನಂಬಿಕೊಂಡು ಬದುಕು ಕಟ್ಟಿಕೊಂಡ ಕಾರ್ಮಿಕರಿಗೆ ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಇನ್ನೂ ಕಳೆದ ಮೂರು ತಿಂಗಳಿಂದ ಉದ್ಯೋಗವಿಲ್ಲದೆ ಕುಟುಂಬದ ನಿರ್ವಹಣೆ ಮಾಡಲಾಗದೆ ಕಾರ್ಮಿಕರು ಸಂಕಷ್ಟದಲ್ಲಿ ಸರ್ಕಾರ ವೇತನ ನೀಡುತ್ತಿಲ್ಲ. ಲಾಕ್‌ಡೌನ್ ಎಫೆಕ್ಟ್‌ನಿಂದ ರಾಜ್ಯದ ಅಕ್ಷರ ದಾಸೋಹ ಕಾರ್ಮಿಕರು ಬದುಕುಗಳು ಬೀದಿಗೆ ಬಂದಿವೆ ಎಂದು ಅಕ್ಷರ ದಾಸೋಹ ಕಾರ್ಮಿಕ ಸಂಘದ ಮುಖಂಡರು ಹೆಚ್ಚುವರಿ ಜಿಲ್ಲಾಧಿಕಾರಿಗೆ ಮನವರಿಕೆ ಮಾಡಿದರು.
ಇನ್ನೂ ಶಾಲೆಗಳಿಗೆ ರಜೆ ಘೋಷಣೆ ಮಾಡಿದ ದಿನದಿಂದ ಅಕ್ಷರ ದಾಸೋಹ ಕಾರ್ಮಿಕರಿಗೆ ಸರಿಯಾಗಿ ಗೌರವ ಧನ ಸರ್ಕಾರ ನೀಡಿಲ್ಲ. ಈಗ ಪುನಃ ಶಾಲೆಗಳು ಆರಂಭವಾಗುವರಿಗೂ ಕಾರ್ಮಿಕರಿಗೆ ಗೌರವ ಧನ ಪಾವತಿಸುವಂತೆ ಕೋರಿ ಎಡಿಸಿ ಔದ್ರಾಮ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.