ಬಿಸಿಲನಾಡಿನಲ್ಲಿ ಕಿಲ್ಲರ್ ಕೊರೋನಾ ಮಧ್ಯೆಯೂ ನೀರಿಗಾಗಿ ಹಾಹಾಕಾರ

ಕಲಬುರಗಿ: ಕಳೆದ 15 ದಿನಗಳಿಂದ ಕುಡಿಯೋಕೆ ಹನಿ ನೀರು ಸಿಗದೆ ಕಲಬುರಗಿ ತಾಲ್ಲೂಕಿನ ಗೊಬ್ಬೂರ್ ಬಿ ಗ್ರಾಮದ ಜನರ ಪರದಾಟ ನಡೆಸುತ್ತಿರುವ ಸ್ಥಿತಿ ನಿರ್ಮಾಣವಾಗಿದೆ.
ನೀರು ಸರಬರಾಜು ಮಾಡದ ಹಿನ್ನೆಲೆಯಲ್ಲಿ ಸಾರ್ವಜನಿಕರು ಗ್ರಾಮ ಪಂಚಾಯ್ತಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ಮಹಿಳೆಯರು ಮಕ್ಕಳು ವಯಸ್ಸಾದವರು ಖಾಲಿ ಕೊಡಗಳನ್ನ ಹಿಡಿದು ಬೀದಿಗಿಳಿದು ಪ್ರತಿಭಟಿಸಿದ್ದು, ಕುಡಿಯುವ ನೀರಿನ ಮುಂದೆ ಕೊರೋನಾ ಭಯ ಮರೆತು ಗುಂಪಾಗಿ ಸೇರಿ ಹೋರಾಟ ನಡೆಸುತ್ತಿದ್ದಾರೆ.
ಬಿಸಿಲ ನಾಡಿನಲ್ಲಿ ಬಿಸಿಲಿನ ಜಳ ಹೆಚ್ಚಾಗುತ್ತಿದ್ದು, ಈಗಲೇ ನೀರಿನ ಸಮಸ್ಯೆ ಎದುರಾಗಿದೆ. ಜಿಲ್ಲಾಡಳಿತ ಎಚ್ಚೇತ್ತುಕೊಳ್ಳಬೇಕಿದೆ.