ಹಸಿರು ವಲಯದಲ್ಲಿ ಹರಿದ ಕೆಂಪು ನೆತ್ತರ: ಪ್ರತಿಷ್ಠೆಗೆ ಬಿದ್ದವು ನಾಲ್ಕು ಹೆಣಗಳು

ಚಾಮರಾಜನಗರ: ಲಾಕ್ ಎಫೆಕ್ಟ್- ಹಣಕಾಸು ವಹಿವಾಟು ಸ್ಥಗಿತದಿಂದ ಘಟನಾವಳಿಗಳು ನಡೆದಿದ್ದು, ಇದೇ ಪ್ರಸಂಗ ನಾಲ್ವರ ಕೊಲೆಯಲ್ಲಿ ಅಂತ್ಯವಾದ ಘಟನೆ ಗುಂಡ್ಲುಪೇಟೆ ಪಟ್ಟಣದ ಜಾಕೀರ್ ಹುಸೇನ್ ನಗರದಲ್ಲಿ ನಡೆದಿದೆ.
ಎರಡು ಕುಟುಂಬಗಳ ಪ್ರತಿಷ್ಠೆಗೆ ನಾಲ್ವರು ಬಲಿಯಾಗಿದ್ದು, ಜಕಾವುಲ್ಲಾ ಖಾನ್, ಇದ್ರಿಶ್ ಮತ್ತು ಖೈಸರ್ ಸ್ಥಳದಲ್ಲೇ ಸಾವಿಗೀಡಾಗಿದ್ದು, ಆಸ್ಪತ್ರೆಗೆ ತೆರಳುವಾಗ ಮತ್ತೋರ್ವ ಮರಣವಪ್ಪಿದ್ದಾನೆ. ಘಟನೆಯಲ್ಲಿ ಇನ್ನಿಬ್ಬರಿಗೆ ಗಂಭೀರ ಗಾಯಗಳಾಗಿದ್ದು ಮೈಸೂರಿನ ಖಾಸಗಿ ಆಸ್ಪತ್ರೆ ರವಾನೆ ಮಾಡಲಾಗಿದೆ. ವೈಯಕ್ತಿಕ ದ್ವೇಷಕ್ಕೆ ನಾಲ್ವರ ಕೊಲೆಯಾಗಿದೆ ಎನ್ನಲಾಗಿದೆ. ಈಗಾಗಲೇ ಚಾಮರಾಜನಗರ ಎಸ್ಪಿ ಗುಂಡ್ಲುಪೇಟೆಯಲ್ಲಿ ಮೊಕ್ಕಾಂ ಹೂಡಿದ್ದು, ಘಟನೆಗೆ ಸಂಬಂಧಿಸಿದಂತೆ ನಾಲ್ವರನ್ನ ಬಂಧಿಸಲಾಗಿದೆ.