Posts Slider

Karnataka Voice

Latest Kannada News

ಐತಿಹಾಸಿಕ ಮಾನವಸಹಿತ ಅಂತರಿಕ್ಷಯಾನ-ಕೊನೆಯ ಕ್ಷಣದಲ್ಲಿ ರದ್ದು

1 min read
Spread the love

 

ಇದೇ ಮೊದಲ ಬಾರಿಗೆ ನಾಸಾ ತನ್ನದೇ ದೇಶದ ಖಾಸಗಿ ಸಂಸ್ಥೆಯೊಂದು ಸಿದ್ದಪಡಿಸಿರುವ ನೌಕೆಯನ್ನ ಹಾಗೂ ಬಾಹ್ಯಾಕಾಶ ಕ್ಯಾಪ್ಸೂಲ್ಅನ್ನು ಬಳಸಿ ಅಂತರಿಕ್ಷಕ್ಕೆ ಮನುಷ್ಯರನ್ನು ಕಳುಹಿಸುತ್ತಿದೆ.

                  ನಾಸಾದ ಮಕತ್ವಾಕಾಂಕ್ಷಿ ಯೋಜನೆ

ಈ ಮೊದಲು 2011 ರಲ್ಲಿ ಅಮೆರಿಕಾ ಮಾನವ ಸಹಿತ ಬಾಹ್ಯಾಕಾಶ ಯಾನವನ್ನ ಕೈಗೊಂಡಿತ್ತಾದರೂ, ಅದರಲ್ಲಿ ಯಶಸ್ವಿಯಾಗಲು ರಷ್ಯಾ ನಿರ್ಮಿಸಿಕೊಟ್ಡಿದ್ದ ಕ್ಯಾಪ್ಸೂಲ್ ಅನ್ನು ಬಳಸಿಕೊಂಡಿತ್ತು.

ಹಾಗಾಗಿ ಇದೇ ಮೊದಲ ಬಾರಿಗೆ ನಾಸಾ ತನ್ನ‌ದೆ ದೇಶದ ಉತ್ಸಾಹಿ ಯುವಕರ ತಂಡ ನಿರ್ಮಿಸಿರುವ ಖಾಸಗಿ ಉಡಾವಣಾ ನೌಕೆ ಹಾಗೂ ಕ್ಯಾಪ್ಸೂಲ್ ಅನ್ನು ಅವಲಂಬಿಸಿ ಗಗನಯಾನ ಮಾಡಲಿದೆ.

                             ಸ್ಪೇಸ್ – ಎಕ್ಸ್ ಸಂಸ್ಥೆ

ಆದರೆ ಹವಾಮಾನ ಕೈ ಕೊಟ್್ಟ ಪರಿಣಾಮ ಉಡಾವಣೆಯನ್ನು ಮುಂದೂಡಲಾಯಿತು. ಮೇ 28 ರಂದು ಭಾರತೀಯ ಕಾಲಮಾನ ರಾತ್ರಿ 2 ಘಂಟೆಗೆ ಉಡಾವಣೆಯಾಗಬೇಕಾಗಿತ್ತು.

ಕಳೆದ ಆರು ವರ್ಷಗಳ ಸತತ ಪರಿಶ್ರಮದಿಂದ ಸಿದ್ದ ಪಡಿಸಲಾದ ಕ್ರೀವ್ ಡ್ರ್ಯಾಗನ್ ಹೆಸರಿನ ಕ್ಯಾಪ್ಸೂಲ್ ಬಾಬ್ ಡೆಂಕನ್ & ಡಗ್ ಹರ್ಲಿ ಎಂಬ ‌ಇಬ್ಬರು ಬಾಹ್ಯಾಕಾಶ ಯಾನಿಗಳನ್ನ ಹೊತ್ತು ಇಂದು ರಾತ್ರಿ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದತ್ತ ಪ್ರಯಾಣ ಬೆಳಸಲಿದೆ.

ಬಾಬ್ ಬೆಂಕನ್

ಹರ್ಲಿ

ಕಳೆದ ಬಾರಿ ಮಾನವ ರಹಿತ ಉಡಾವಣೆಯನ್ನು ಸ್ಪೇಸ್ -ಎಕ್ಸ್ ಸಂಸ್ಥೆ ಕೈಗೊಂಡಾಗ ಅದು ತಾಂತ್ರಕ ದೋಷದಿಂದಾಗಿ ಬ್ಲಾಸ್ಟ್ ಆಗಿತ್ತು.

ಆದರೆ ಇದೀಗ ಅದೇ ನೌಕೆಯನ್ನು ಸುಸಜ್ಜಿತವಾಗಿ ತಯಾರಿಸಿ ಪರೀಕ್ಷಿಸಲಾಗಿದೆ ಎನ್ನುತ್ತಾರೆ ಸ್ಪೇಸ್ -ಎಕ್ಸ್ ನ ಮುಖ್ಯಸ್ಥ ಎಲಾನ್ ಮಸ್ಕ್.

 


Spread the love

Leave a Reply

Your email address will not be published. Required fields are marked *