ದುಷ್ಕರ್ಮಿಗಳಿಂದ ಕತ್ತು ಕೂಯ್ದು ಯುವಕನ ಬರ್ಭರ ಹತ್ಯೆ

ಮಂಡ್ಯ: ಜಿಲ್ಲೆಯ ಮದ್ದೂರು ತಾಲ್ಲೂಕಿನ ಕೆ.ಶೆಟ್ಟಹಳ್ಳಿ ಗ್ರಾಮದಲ್ಲಿ ರಘು ಎಂಬ ಜನಪದ ಕಲಾವಿದನನ್ನ ದುಷ್ಕರ್ಮಿಗಳು ಬರ್ಭರವಾಗಿ ಹತ್ಯೆಗೈದು ಪರಾರಿಯಾಗಿರುವ ಘಟನೆ ನಡೆದಿದೆ.
ತಡರಾತ್ರಿ ಕತ್ತು ಕುಯ್ದು ಪರಾರಿಯಾಗಿರುವ ದುಷ್ಕರ್ಮಿಗಳ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ. ಜನಪದ ಕಲಾವಿದ ರಘು ಎಲ್ಲರೊಂದಿಗೆ ಬೆರೆಯುತ್ತಿದ್ದ, ಹಲವು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ತಮ್ಮ ಭಾಗದಲ್ಲಿ ಹೆಸರು ಮಾಡಿದ್ದ. ಇಂತಹ ಯುವಕನ ಹತ್ಯೆಯಾಗಿದ್ದು, ಅನೇಕರಲ್ಲಿ ಆಶ್ಚರ್ಯ ಮೂಡಿಸಿದೆ. ಪ್ರಕರಣ ದಾಖಲಿಸಿಕೊಂಡಿರುವ ಕೆ.ಎಂ.ದೊಡ್ಡಿ ಠಾಣೆ ಪೊಲೀಸ್ ರು ಆರೋಪಿಗಳನ್ನ ಶೀರ್ಘದಲ್ಲಿ ಬಂಧಿಸುವ ಇರಾದೆ ಹೊಂದಿದ್ದಾರೆ.