ಮಲೈ ಮಾದಪ್ಪನ ದೇವಾಲಯ ಓಪನ್ ಗೆ ಶಾಸಕರ ವಿರೋಧ: ಆರ್ ಎಸ್ ಎಸ್ ಹುನ್ನಾರ.. ?
1 min readಚಾಮರಾಜನಗರ: ಆರ್ ಎಸ್ ಎಸ್ ಹುನ್ನಾರದಿಂದ ಮುಜರಾಯಿ ದೇವಸ್ಥಾನಗಳ ಬಾಗಿಲು ತೆರೆಯಲು ಮಾತ್ರ ಅವಕಾಶ ನೀಡಲಾಗಿದೆ. ಮಸೀದಿ, ಚರ್ಚ್ ಗಳ ತೆರವಿಗೆ ಅನುಮತಿ ಇಲ್ಲ, ಪ್ರಾರ್ಥನೆ, ಪೂಜೆ ಎಲ್ಲ ಧರ್ಮದ ಜನರ ಹಕ್ಕು ಎಂದು ಶಾಸಕ ನರೇಂದ್ರ ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಹನೂರು ಶಾಸಕ ನರೇಂದ್ರ, ಮುಜರಾಯಿ ಸಚಿವರು ಜೂನ್ 1 ರಿಂದ ದೇವಾಲಯ ಆರಂಭಿಸಲು ಸೂಚನೆ ನೀಡಿದ್ದಾರೆ. ಮಲೈ ಮಹದೇಶ್ವರ ದೇವಾಲಯ ಓಪನ್ ಆದರೆ ತಮಿಳುನಾಡು, ಕೇರಳ, ಆಂಧ್ರಪ್ರದೇಶ ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಭಕ್ತರ ದಂಡೆ ಹರಿದು ಬರಲಿದೆ. ಇದರಿಂದ ಭಕ್ತಾಧಿಗಳನ್ನು ಆಡಳಿತ ಮಂಡಳಿ ಹೇಗೆ ನಿಯಂತ್ರಿಸಲು ಸಾಧ್ಯವಾಗುತ್ತೆ..? ಎಂದು ಪ್ರಶ್ನಿಸಿದ್ದಾರೆ.
ದರ್ಶನಕ್ಕೆ ಬಂದ ಭಕ್ತರಿಗೆ ದಾಸೋಹ ವ್ಯವಸ್ಥೆ ಮಾಡಲೂ ಸಾಧ್ಯವಾಗಲ್ಲ. ದಾಸೋಹ ವ್ಯವಸ್ಥೆ ಮಾಡದಿದ್ರೆ ಕಾಲದಿಂದಲೂ ನಡೆದು ಬಂದಿರುವ ಪರಂಪರೆ ವ್ಯವಸ್ಥೆಗೆ ದಕ್ಕೆಯಾಗತ್ತೆ. ದರ್ಶನ, ದಾಸೋಹ ಎರಡಕ್ಕೂ ಅವಕಾಶ ಕೊಟ್ರೆ ರೋಗ ಹೆಚ್ಚಾಗುವ ಭೀತಿ. ದೇವಾಲಯದ ಬಾಗಿಲು ತೆರೆದು ಮಸೀದಿ, ಚರ್ಚ್ ಗೆ ಅವಕಾಶ ಕೊಡದಿರೋದು ಸರಿಯಲ್ಲ.ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ. ಇನ್ನೊಂದಷ್ಟು ದಿನ ದೇವಾಲಯದ ಬಾಗಿಲು ತೆರೆಯದೆ ಇದ್ರೆ ಒಳ್ಳೇಯದು ಪೂಜೆಗೆ ಆನ್ ಲೈನ್ ವ್ಯವಸ್ಥೆ ಮುಂದುವರಿಸಿ ಎಂದು ಹನೂರು ಶಾಸಕ ನರೇಂದ್ರ ಹೇಳಿದರು.