ಮಿಡತೆಗಳು ಪಾಕಿಸ್ತಾನದಿಂದ ಮಹಾರಾಷ್ಟ್ರಕ್ಕೆ ಬಂದಿವೆ : ರೈತರಿಗೆ ಸೂಚನೆ ನೀಡಿದ ಕೌರವ

ಬೆಂಗಳೂರು: ಮಿಡತೆ ಸೌತ್ ಆಫ್ರಿಕಾನಿಂದ ಪ್ರಾರಂಭವಾಗಿ ಅಲ್ಲಿಂದ ಬುಲಕಿಸ್ಥಾನ, ಪಾಕಿಸ್ತಾನದ ಮೂಲಕ ಮಹಾರಾಷ್ಟ್ರ ಪ್ರವೇಶ ಮಾಡಿದೆ ಎಂದು ಬಿಸಿ ಪಾಟೀಲ್ ಹೇಳಿದರು.
ತೋಟಗಾರಿಕೆ ಸಚಿವ ನಾರಾಯಣಗೌಡರೊಂದಿಗೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಬಿ.ಸಿ.ಪಾಟೀಲ, ಕ್ಲೋರೊ ಪೈರಮ್ ಪಾಸ್ ಮೆಡಿಸಿನ್ ಅನ್ನು ಬೇಳೆಗಳಿಗೆ ಸಿಂಪಡನೆ ಮಾಡಬೇಕು. 20%ಎಸಿ , ಲ್ಯಾಂಬ್ಡಾ ಸಾ ಲೋ ತ್ರೀನ್ 200ಗ್ರಾಂ ಹಾಕಿ ಒಂದು ಎಕರೆ ಬೆಳೆಗೆ ಸಿಂಪಡಣೆ ಮಾಡಬೇಕು ಎಂದರು.
ಬೀದರ್ , ಗುಲ್ಬರ್ಗಾ , ರಾಯಚೂರು ಭಾಗದಲ್ಲಿ ಈಗಾಗಲೇ ಸಿಂಪಡಣೆ ಪ್ರಾರಂಭ ಆಗಿದೆ. ಸಿಂಪಡನೆಗೆ, ಲೊಬಸ್ಟಾ ಎಂದು ಇಂಗ್ಲಿಷ್ ನಲ್ಲಿ ಕರೆಯುತ್ತಾರೆ. ಇನ್ನೂರು ಕೋಟಿ ರೂ ಔಷಧಿ ಸಿಂಪಡಣೆಗೆ ನೀಡಲಾಗಿದೆ. ಎಸ್ಡಿಆರ್ ಎಫ್, ಎನ್ಡಿಆರ್ಎಫ್ ಅಡಿ ಇರುವ ಹಣ ಬಳಸಿಕೊಳ್ಳುವ ಅವಕಾಶ ಇದೆ. ಎಂಟು ದಿನಗಳ ಕಾಲ ಗಾಳಿ ಬೀಸುವಿಕೆ ಕಾರಣ ರಾಜ್ಯಕ್ಕೆ ಮಿಡತೆ ದಾಳಿ ಸಾದ್ಯತೆ ಇಲ್ಲ. ಹಾಗಾಗಿ ರೈತರು ಆತಂಕ ಪಡುವ ಅಗತ್ಯ ಇಲ್ಲ ಎಂದರು.