ಹಾವೇರಿಯಲ್ಲಿ ಮಳೆಗೆ ಶಾಲೆ ಮೇಲ್ಚಾವಣಿ ಉಡೀಸ್: ಸಿಡಿಲಿಗೆ ಮಹಿಳೆ ಬಲಿ
1 min readಹಾವೇರಿ: ಜಿಲ್ಲೆಯಾದ್ಯಂತ ಬಿರುಗಾಳಿ ಸಮೇತ ಬಾರಿ ಮಳೆಯಾಗಿದ್ದು, ಬಿರುಗಾಳಿ ಹೊಡೆತಕ್ಕೆ ಸರ್ಕಾರಿ ಶಾಲೆಯ ಮೇಲ್ಚಾವಣಿ ಸಂಪೂರ್ಣ ಹಾರಿ ಹೋಗಿರುವ ಘಟನೆ ಹಾವೇರಿ ಜಿಲ್ಲೆಯ ಹಿರೆಕೇರೂರ ನಗರದ ಕೋಟೆ ಓಣಿಯಲ್ಲಿ ಸಂಭವಿಸಿದೆ.
ಸುಮಾರು ಅರ್ಧ ಗಂಟೆ ಸುರಿದ ಮಳೆಗೆ ಮೇಲ್ಚಾವಣಿ ಕುಸಿದು ಬಿದ್ದಿದೆ. ಯಾರೂ ಇಲ್ಲದ ಪರಿಣಾಮ ಯಾವುದೇ ತೊಂದರೆಯಾಗಿಲ್ಲ. ತಹಶೀಲ್ದಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಸಿಡಿಲು ಹೊಡೆದು ಮಹಿಳೆ ಮೃತ
ಹಿರೇಕೆರೂರು ತಾಲೂಕು ಹೊಸ ನಿಡನೇಗಿಲು ಗ್ರಾಮದಲ್ಲಿ ಸಿಡಿಲು ಬಡಿದು ಮಲ್ಲವ್ವ ಮಂಜಪ್ಪ ನಾಯ್ಕರ ಸಾವಿಗೀಡಾಗಿದ್ದಾರೆ. ರಭಸವಾಗಿ ಮಳೆ ಸುರಿಯುತ್ತಿದ್ದ ಸಮಯದಲ್ಲಿ ಬೇರೆ ಕಡೆ ಹೋಗಲು ಪ್ರಯತ್ನ ನಡೆಸುತ್ತಿದ್ದಾಗ ಈ ದುರ್ಘಟನೆ ನಡೆದಿದೆ.