ಜೂಜಾಡುತ್ತಿದ್ದ ಸಮಯದಲ್ಲಿ ಪೊಲೀಸ್ ದಾಳಿ: ಬೆದರಿ ಹಾರ್ಟ್ ಅಟ್ಯಾಕ್: ಜೂಜುಕೋರ ಸಾವು
ಮಂಡ್ಯ: ಜೂಜು ಅಡ್ಡೆ ಮೇಲೆ ಪೊಲೀಸರ ದಾಳಿ ನಡೆಸಿದಾಗ ಪೊಲೀಸರ ದಾಳಿಗೆ ಹೆದರಿ ಸ್ಥಳದಲ್ಲೇ ಹೃದಯಘಾತವಾಗಿ ಜೂಜುಕೋರ ಸಾವಿಗೀಡಾದ ಘಟನೆ ಮಂಡ್ಯ ತಾಲೂಕಿನ ಚಿಕ್ಕಬಳ್ಳಿ ಗ್ರಾಮದಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನ ಕೆರಗೋಡು ಗ್ರಾಮದ ಕೃಷ್ಣಪ್ಪ ಎಂದು ಗುರುತಿಸಲಾಗಿದೆ. ಜೂಜಾಟದ ವೇಳೆ ಮಾಹಿತಿ ಆದರಿಸಿ ಕೆರಗೋಡು ಪೊಲೀಸರು ದಾಳಿ ಮಾಡಿದ್ರು. ಇಪ್ಪತ್ತಕ್ಕೂ ಹೆಚ್ಚು ಜನರಿದ್ದ ತಂಡದಲ್ಲಿ ಅನೇಕರು ಪರಾರಿಯಾಗಿದ್ದರು. ಆದರೆ, ಈತ ಮಾತ್ರ ಭಯದಿಂದ ಸ್ಥಳದಲ್ಲಿಯೇ ಕುಸಿದು ಬಿದ್ದು ಸಾವಿಗೀಡಾಗಿದ್ದಾನೆ. ದಾಳಿ ಮಾಡಿದ ಕೆರೆಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.