Posts Slider

Karnataka Voice

Latest Kannada News

ಧಾರವಾಡ: ಎರಡು  ಕೊರೋನಾ ಪಾಸಿಟಿವ್ ಪ್ರಕರಣ ಪತ್ತೆ: ಟ್ರಾವೆಲ್ ಹಿಸ್ಟರಿ ಹೇಗಿದೆ ನೋಡಿ

1 min read
Spread the love

ಧಾರವಾಡ: ಜಿಲ್ಲೆಯಲ್ಲಿ ಮತ್ತೆ ಎರಡು   ಕೋವಿಡ್ ಪಾಸಿಟಿವ್ ಪ್ರಕರಣಗಳು  ಪತ್ತೆಯಾಗಿವೆ  ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ.

ಪಿ-3397   (47 ವರ್ಷ , ಪುರುಷ) ಇವರು ಕಲಘಟಗಿ ತಾಲೂಕಿನ ಬಿ.ಗುಡಿಹಾಳ ಗ್ರಾಮದವರಾಗಿದ್ದು, ಕೆಮ್ಮು, ನೆಗಡಿ ಹಾಗೂ ತೀವ್ರ ಜ್ವರದಿಂದ ಬಳಲುತ್ತ ಎಸ್ ಡಿ ಎಂ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದರು. ಕೋವಿಡ್ ಪಾಸಿಟಿವ್ ದೃಢಪಟ್ಟ ನಂತರ ಕಿಮ್ಸ್ ಗೆ ದಾಖಲಿಸಲಾಗಿದೆ.

ಪಿ-3398 ( 25 , ಪುರುಷ )  ಇವರು ಹುಬ್ಬಳ್ಳಿ ಶಹರ ನಿವಾಸಿಯಾಗಿದ್ದಾರೆ,  ಬೆಂಗಳೂರಿನಿಂದ ಆಗಮಿಸಿರುವ  ಪ್ರಯಾಣ ಹಿನ್ನೆಲೆ  ಹೊಂದಿದ್ದಾರೆ.

ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ  48  ಕ್ಕೆ ಏರಿಕೆಯಾಗಿದೆ. ಈಗಾಗಲೇ  11ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಉಳಿದವರು  ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.


Spread the love

Leave a Reply

Your email address will not be published. Required fields are marked *