ಮಹಾನಗರ ಪಾಲಿಕೆಯ ಆವರಣವೇ ಈಗ ಕುಡುಕರ ಬಾರ್: ಕೂಡಲು ಜಾಗ ಹುಡುಕಿಕೊಂಡ ಕುಡುಕರು
ಹುಬ್ಬಳ್ಳಿ: ಲಾಕ್ ಡೌನ್ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮದ್ಯದಂಗಡಿಗಳಲ್ಲಿ ಕೂಡುವ ವ್ಯವಸ್ಥೆಯಿಲ್ಲದ ಕಾರಣ ಬಹುತೇಕ ಕುಡುಕರು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆವರಣವನ್ನೇ ತಮ್ಮ ಅಡ್ಡೆ ಮಾಡಿಕೊಂಡಿದ್ದಾರೆ.
ಲಾಕ್ ಡೌನ್ ಪರಿಣಾಮ ಮದ್ಯದಂಗಡಿಗಳಲ್ಲಿ ಸಿಟಿಂಗ್ ವ್ಯವಸ್ಥೆ ಇಲ್ಲ. ಇದೇ ಕಾರಣಕ್ಕೆ ಪಾರ್ಸಲ್ ತಂದು ಮಹಾನಗರ ಪಾಲಿಕೆಯ ಆವರಣದ ಗಿಡಗಳ ಕೆಳಗೆ ಕುಳಿತು ಮದ್ಯಸೇವನೆ ಮಾಡುತ್ತಿದ್ದಾರೆ. ಹೀಗಾಗಿ ಆವರಣದಲ್ಲೀಗ ಪಾಲಿಕೆ ಆವರಣದಲ್ಲೇ ಮದ್ಯದ ಘಮಲು ಹೆಚ್ಚಾಗಿದೆ. ನಗರವನ್ನೆಲ್ಲ ಸ್ವಚ್ಚಗೊಳಿಸೋ ಪಾಲಿಕೆಯ ಆವರಣದಲ್ಲೇ ಕುಡುಕರ ಹಾವಳಿ ಹೆಚ್ಚಾಗಿದ್ದು, ಬೇಕಾ ಬಿಟ್ಟಿಯಾಗಿ ಮದ್ಯದ ಬಾಟಲಿ, ಪೆಟ್ಗಳು ಬಿದ್ದಿವೆ.