ಉಮೇಶ ಕತ್ತಿ ಅರೆಸ್ಟ್: ಪೊಲೀಸರ ಮುಂದೆ ತಪ್ಪೋಪ್ಪಿಕೊಂಡ ಮಹಾನ್ ಕಿಲಾಡಿ ಕತ್ತಿ
ದಾವಣಗೆರೆ: ಕಿಡಿಗೇಡಿ ಉಮೇಶ್ ಕತ್ತಿ ಅರೆಸ್ಟ್ ಆಗಿದ್ದಾರೆ. ಹೌದು.. ನಿಜವಾಗಿಯೂ ಈತ ಮಾಡಿದ ಘನಂದಾರಿ ಕೆಲಸದಿಂದ ಪೊಲೀಸರು ಕೂಡಾ ರೋಚ್ಚಿಗೆದ್ದಿದ್ದರು. ಕೊನೆಗೂ ಈಗ ಪೊಲೀಸರ ಬಲೆಗೆ ಬಿದ್ದು, ‘ನಾನು ಮಾಡಿದ್ದು ತಪ್ಪಾಯಿತು’ ಎಂದು ಗೋಗೆರೆದುಕೊಂಡಿದ್ದಾನೆ.
ಅಸಲಿಗೆ ಈ ಉಮೇಶ ಕತ್ತಿ ಇಂದಿರಾಗಾಂಧಿ ಭಾವಚಿತ್ರಕ್ಕೆ ಮಸಿ ಬಳಿದಿದ್ದ. ದಾವಣಗೆರೆ ನಗರದ ಜಿಲ್ಲಾಸ್ಪತ್ರೆ ಆವರಣದ ಇಂದಿರಾ ಕ್ಯಾಂಟೀನ್ ಮುಂದಿರುವ ಭಾವಚಿತ್ರಕ್ಕೆ ಮಸಿ ಬಳಿದಿದ್ದ. ಅದಕ್ಕೆ ಕಾರಣವಾಗಿದ್ದು, ಬೆಂಗಳೂರು ಯಲಹಂಕ ಪ್ಲೈ ಓವರ್ ಗೆ ಸಾವರ್ಕರ್ ಹೆಸರಿಡಲು ಬಿಜೆಪಿ ಮುಂದಾದಾಗ ಕಾಂಗ್ರೆಸ್ ಇದನ್ನ ವಿರೋಧಿಸಿದ್ದು. ಇದೇ ಕಾರಣಕ್ಕೆ ಇಂದಿರಾಗಾಂಧಿ ಅವರ ಭಾವಚಿತ್ರಕ್ಕೆ ಮಸಿ ಬಳಿದಿದ್ದ ಉಮೇಶ್ ಕತ್ತಿ.
ಈ ಹಿಂದೆ ಕೂಡಾ ನಾಲ್ಕು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಉಮೇಶ ವಿರುದ್ಧ ದೂರು ಬಂದಿದ್ದವು. ಸಮಾಜದ ಶಾಂತಿಗೆ ಭಂಗ ತರುವ ಪ್ರಕರಣಗಳಲ್ಲಿ ನಿರಂತರ ಭಾಗಿ ಆಗುತ್ತಿರುವ ದಾವಣಗೆರೆ ನಗರದ ಭಾರತ ಕಾಲೋನಿ ನಿವಾಸಿ ಉಮೇಶ್ ಕತ್ತಿಯನ್ನ ಬಂಧನ ಮಾಡಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಮಾಹಿತಿ ನೀಡಿದ್ದಾರೆ.