ಮುಂಬೈನಿಂದ ಗುಮ್ಮಟನಗರಿಗೆ ಬಂದಿಳಿದ 212 ಜನ: ಕ್ವಾರಂಟೈನ್ ಮಾಡಲು ಸಿದ್ಧತೆ
ವಿಜಯಪುರ: ವಿಜಯಪುರಕ್ಕೆ ಆಗಮಿಸಿದ ಮುಂಬೈ ರೈಲಿನಲ್ಲಿ 212 ಕಾರ್ಮಿಕರ ಬಂದಂತಾಗಿದ್ದು, ಎಲ್ಲರನ್ನೂ ತಾಲೂಕು ಕೇಂದ್ರಗಳಲ್ಲಿ ಕ್ವಾರಂಟೈನ್ ಮಾಡಲು ಜಿಲ್ಲಾಡಳಿತ ವ್ಯವಸ್ಥೆ ಮಾಡಿಕೊಂಡಿದೆ.
ವಿಜಯಪುರ ರೈಲು ನಿಲ್ದಾಣಕ್ಕೆ ಬಂದಿಳಿದ ಕಾರ್ಮಿಕರಿಗೆ ನಿಲ್ದಾಣದ ಎದುರೇ ಬಸ್ ವ್ಯವಸ್ಥೆ ಮಾಡಲಾಗಿದ್ದು, ಸಿಂದಗಿ, ಇಂಡಿ, ವಿಜಯಪುರ, ಮುದ್ದೇಬಿಹಾಳ ಕಡೆಗೆ ಬಸ್ ತೆರಳಲಿವೆ. ಆಯಾ ತಾಲೂಕುಗಳಲ್ಲಿ ಕ್ವಾರಂಟೈನ್ ಮಾಡಲು ನಿರ್ಧರಿಸಲಾಗಿದೆ. 7 ದಿನಗಳ ಬಳಿಕ ಸ್ವಾಬ್ ಕಲೆಕ್ಟ್ ಮಾಡಿಕೊಳ್ಳಲಿರುವ ಆರೋಗ್ಯ ಇಲಾಖೆ. ನೆಗೆಟಿವ್ ಬಂದ್ರೆ ಮನೆಗೆ ವಾಪಸ್, ಪಾಜಿಟಿವ್ ಬಂದಲ್ಲಿ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಶಿಫ್ಟ್ ಮಾಡುವುದಾಗಿ ಜಿಲ್ಲಾಡಳಿತ ತಿಳಿಸಿದೆ.