ರಮೇಶ ಜಾರಕಿಹೊಳಿಗೆ ಬಿಜೆಪಿಯಲ್ಲಿ ಉಸಿರುಗಟ್ಟಿಸೋ ವಾತವಾರಣವಿದೆ: ಡಿಸಿಎಂ ಲಕ್ಷ್ಮಣ ಸವದಿ ಯಾರ ಜೊತೆ ಸಂಪರ್ಕದಲ್ಲಿದ್ದಾರೆ: ಉಗ್ರಪ್ಪ ಆವಾಜ್

ಬೆಂಗಳೂರು: ಸಚಿವ ರಮೇಶ್ ಜಾರಕಿಹೊಳಿ ಕೈ ಶಾಸಕರ ರಾಜೀನಾಮೆ ವಿಚಾರವಾಗಿ ಮಾತನಾಡಿರುವ ಕಾಂಗ್ರೆಸ್ ಮುಖಂಡ ಉಗ್ರಪ್ಪ, ಬಿಜೆಪಿಯವರು ಹಲವರು ನಮ್ಮ ಸಂಪರ್ಕದಲ್ಲಿದ್ದಾರೆ. ರಮೇಶ್ ಜಾರಕಿಹೊಳಿಗೆ ಬಿಜೆಪಿಯಲ್ಲಿ ಉಸಿರುಗಟ್ಟಿಸುವ ವಾತಾವರಣದಲ್ಲಿದ್ದಾರೆ. ಅವರೇ ನಮ್ಮ ಪಕ್ಷದ ಸಂಪರ್ಕದಲ್ಲಿ ಇದ್ದಾರೆ. ಹಳೇ ನೀರು ಹರಿದು ಹೋಗಿದೆ. ಬಿಜೆಪಿಯಲ್ಲಿ ಎಲ್ಲ ಮೊದಲಿನ ತರಹ ಸೇರಿಲ್ಲ ಎಂದು ಹೇಳಿದರು.
ನಿಜಕ್ಕೂ ಜಾರಕಿಹೊಳಿ ಜೊತೆ ನಮ್ಮ ಪಾರ್ಟಿಯವರು ಸಂಪರ್ಕದಲ್ಲಿ ಇದ್ದರೆ ಅವರ ಹೆಸರು ಹೇಳಲಿ. ನಾನು ಬಹಿರಂಗವಾಗಿ ನಮ್ಮ ಸಂಪರ್ಕದಲ್ಲಿ ಇರುವವರ ಹೆಸರು ಹೇಳ್ತೇನೆ. ಇದು ಓಪನ್ ಚಾಲೆಂಜ್. ಡಿಸಿಎಂ ಲಕ್ಷ್ಮಣ ಸವದಿ ಕೂಡ ಸೇರಿ ಯಾರು ಯಾರ ಸಂಪರ್ಕದಲ್ಲಿ ಇದ್ದಾರೆ ನಾವು ಬಹಿರಂಗಪಡಿಸ್ತೇವೆ. ಎಲ್ಲವನ್ನೂ ನಮ್ಮ ಸಿಎಲ್ಪಿ ನಾಯಕರು, ಹೈಕಮಾಂಡ್ ಗಮನದಲ್ಲಿದೆ. ಮುಂದೆ ನಾವೂ ಸೂಕ್ತ ಸಂದರ್ಭದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.