Posts Slider

Karnataka Voice

Latest Kannada News

ಹಣ ಪೀಕುವುದಕ್ಕಾಗೇ ಶಾಲೆ ಆರಂಭಿಸಿದ್ರಾ: ಗುಮ್ಮಟನಗರಿಯಲ್ಲಿ ಆರಂಭಗೊಂಡಿದೆ ನರ್ಸರಿ ವಿದ್ಯಾಭ್ಯಾಸ

1 min read
Spread the love

ವಿಜಯಪುರ: ಈ ನರ್ಸರಿ ಶಾಲೆಗೆ ಕೊರೋನಾ ಭಯವೇ ಇಲ್ಲದಂತಾಗಿದೆ. ಮಕ್ಕಳ ಬಗ್ಗೆಯೂ ಈ ಶಾಲೆಗೆ ಕಾಳಜಿ ಇಲ್ಲವೆನ್ನುವಂತಾಗಿದೆ. ಪುಟಾಣಿ ಮಕ್ಕಳ ಜೀವದ ಜೊತೆಗೆ ಚೆಲ್ಲಾಟವಾಡ್ತಿದೆ ವಿಜಯಪುರದ ನರ್ಸರಿ ಸ್ಕೂಲ್.

ವಿಜಯಪುರ ನಗರದ ರಹೀಂ ನಗರದಲ್ಲಿರುವ ರೋಜ್ ಲೈನ್ ನರ್ಸರಿ ಸ್ಕೂಲ್ ಮಕ್ಕಳನ್ನ ಸೇರಿಸಿಕೊಂಡು ಪಾಠ ಶುರು ಮಾಡಿದೆ. ಜಿಲ್ಲಾಡಳಿತದ ಯಾವುದೇ ಸೂಚನೆ ಇಲ್ಲದಿದ್ದರೂ, ಪುಟಾಣಿ‌ ಮಕ್ಕಳ ಜೀವದ ಜೊತೆಗೆ ಸ್ಕೂಲ್ ಆಡಳಿತ ಮಂಡಳಿ ಚೆಲ್ಲಾಟವಾಡುತ್ತಿದೆ. ಈಗಾಗಲೇ ಫೀ ವಸೂಲಿಯನ್ನ ಶಾಲೆ ಶುರು ಮಾಡಿದೆ. ಕೆಲವೊಂದಿಷ್ಟು ಪಾಲಕರು ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ ಮಾಡಿ, ಶಾಲೆಗೆ ಬಿಟ್ಟು ಹೋಗುತ್ತಿದ್ದಾರೆ. ಕೊರೋನಾ ಸಮಯದಲ್ಲೂ ಚಿಕ್ಕಮಕ್ಕಳ ಬಗ್ಗೆ ಯೋಚಿಸದೇ ಶಾಲೆ ಆರಂಭಿಸಿರುವ ನರ್ಸರಿ ಬಗ್ಗೆ ಜಿಲ್ಲಾಡಳಿ ಯಾವ ಕ್ರಮ ಜರುಗಿಸುತ್ತದೆ ಎಂಬುದನ್ನ ಕಾದು ನೋಡಬೇಕಿದೆ.


Spread the love

Leave a Reply

Your email address will not be published. Required fields are marked *

You may have missed