ಮೂವರು ಪೊಲೀಸರಿಗೆ ಕೊರೋನಾ ಸೋಂಕು: ಬೆಚ್ಚಿಬಿದ್ದ ಬಿಸಿಲನಗರಿ
ರಾಯಚೂರು: ಪಶ್ಚಿಮ ಪೊಲೀಸ್ ಠಾಣೆಯ ಮೂವರು ಪೊಲೀಸ್ ಕಾನ್ಸಟೇಬಲ್ ಗಳಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದ್ದು, ಜಿಲ್ಲೆಯ ಪೊಲೀಸರು ಆತಂಕಕ್ಕೆ ಒಳಗಾಗಿದ್ದಾರೆ.
25 ರಿಂದ 30 ವರ್ಷದ ಪೊಲೀಸರಿಗೆ ಸೋಂಕು ಬಂದಿರುವುದು. ಇವೆಲ್ಲರೂ ಅಗ್ರಿ ಯುನಿವರ್ಸಿಟಿಯ ಕ್ವಾರಂಟೈನ್ ಸೆಂಟರ್ ಗೆ ಕರ್ತವ್ಯ ನಿರ್ವಹಿಸುವ ವೇಳೆ ವೈರಸ್ ವಕ್ಕರಿಸಿದೆ. ಮಹಾರಾಷ್ಟ್ರದಿಂದ ಬಂದ ವಲಸಿಗರಿದ್ದ ಕ್ವಾರಂಟೈನ್ ಸೆಂಟರ್ ನ ಬಳಿ ಇವರು ಕರ್ತವ್ಯ ನಿರ್ವಹಣೆ ಮಾಡುತ್ತಿದ್ದರು. ಇದೀಗ ಪಶ್ಚಿಮ ಪೊಲೀಸ್ ಠಾಣೆಯನ್ನ ಸೀಲ್ ಡೌನ ಮಾಡಲು ನಿರ್ಧಿರಿಸಲಾಗಿದೆ ಎಂದು ರಾಯಚೂರು ಎಸ್ಪಿ ಡಾ.ಸಿ.ಬಿ.ವೇದಮೂರ್ತಿ ಮಾಹಿತಿ ನೀಡಿದ್ದಾರೆ.