ಖಾಸಗಿ ಆಸ್ಪತ್ರೆ ದರವನ್ನ ಸರಕಾರ ಸಹಿಸೋಲ್ಲ: ಇಂದೇ ಸಭೆ ಮಾಡಿ ದರ ನಿಗದಿ

ಬೆಂಗಳೂರು: ಖಾಸಗಿ ಆಸ್ಪತ್ರೆಗಳು ಸರ್ಕಾರಕ್ಕೆ ದರದ ಬಗ್ಗೆ ಪ್ರಸ್ತಾಪಿಸಿವೆ. ಕೋವಿಡ್ ಸಂದರ್ಭದಲ್ಲೂ ಖಾಸಗಿ ಆಸ್ಪತ್ರೆಯ ದರ ಹೆಚ್ಚಾಗಲು ಬಿಡಲ್ಲ. ಯಾವುದೇ ಕಾರಣಕ್ಕೂ ಅವರು ಹೇಳಿದ ದರ ಫಿಕ್ಸ್ ಮಾಡಲ್ಲ ಎಂದು ಆರೋಗ್ಯ ಸಚಿವ ಶ್ರೀರಾಮುಲು ಹೇಳಿದರು.
ಕೋವಿಡ್ ರೋಗಿಗಳಿಗೆ ಅಗತ್ಯವಾದ ಬೆಡ್ ವ್ಯವಸ್ಥೆ ಸರ್ಕಾರಿ ಆಸ್ಪತ್ರೆಯಲ್ಲೇ ಇವೆ. ಆದರೂ ಹಲವರು ಖಾಸಗಿ ಆಸ್ಪತ್ರೆಗೆ ಹೋಗ್ತಿದ್ದಾರೆ. ಹಾಗಾಗಿ ಅಲ್ಲಿ ದರವೂ ಕೂಡ ಕಡಿಮೆ ಇರಬೇಕಾಗುತ್ತೆ. ಇವತ್ತು ಸಂಜೆ ಅಧಿಕಾರಿಗಳ ಜತೆ ಸಭೆ ನಡೆಸುತ್ತೇನೆ. ಸರ್ಕಾರವೇ ಒಂದು ದರ ನಿಗದಿ ಮಾಡುತ್ತೆ. ಎಪಿಎಲ್, ಬಿಪಿಎಲ್ ಕೋವಿಡ್ ರೋಗಿಗಳಿಗೆ ಸೂಕ್ತ ವ್ಯವಸ್ಥೆ ಮಾಡಿದ್ದೇವೆ ಎಂದರು.