ಮುರುಗೇಶ ನಿರಾಣಿ ಜೊತೆಗೂಡಿ ಸಿಎಂ ಭೇಟಿ ಮಾಡಿದ ಕತ್ತಿ ಬ್ರದರ್ಸ್
ಬೆಂಗಳೂರು: ಕೋರ್ ಕಮಿಟಿ ಸಭೆ ಬೆನ್ನೆಲೆ ಸಿಎಂ ಯಡಿಯೂರಪ್ಪರನ್ನ ಮುರುಗೇಶ ನಿರಾಣಿ ಜೊತೆಗೂಡಿ ಕತ್ತಿ ಸಹೋದರರು ಭೇಟಿ ನೀಡಿ, ಮಾತುಕತೆ ನಡೆಸಿದರು.
ಬೆಳ್ಳಂಬೆಳಗ್ಗೆ ಕಾವೇರಿ ನಿವಾಸಕ್ಕೆ ಭೇಟಿಕೊಟ್ಟು ಸಿಎಂ ಜೊತೆ ಚರ್ಚಿಸಿದ ಉಮೇಶ್ ಕತ್ತಿ ಮತ್ತು ರಮೇಶ್ ಕತ್ತಿ. ಕೋರ್ ಕಮಿಟಿ ಸಭೆಯಲ್ಲಿ ನಡೆದ ಚರ್ಚೆ ಬಗ್ಗೆ ಮಾಹಿತಿ ಪಡೆದ ಕತ್ತಿ ಬ್ರದರ್ಸ್. ರಾಜ್ಯಸಭಾ ಚುನಾವಣೆಗೆ ಹೈಕಮಾಂಡಗೆ ರಮೇಶ್ ಕತ್ತಿ ಹೆಸರು ಶಿಫಾರಸು ಮಾಡಿದ್ದಕ್ಕೆ ಸಿಎಂಗೆ ಧನ್ಯವಾದವನ್ನ ಉಮೇಶ ಕತ್ತಿ ಅರ್ಪಿಸಿದರು. ಕಳೆದ ಬಾರಿ ಭೇಟಿ ನೀಡಿದಾಗ ಸಹೋದರರಿಬ್ಬರೇ ಹೋಗಿದ್ದು, ಇಂದು ಮುರುಗೇಶ ನಿರಾಣಿಯವರನ್ನೂ ಜೊತೆಗೆ ಕರೆದುಕೊಂಡು ಹೋಗಿ ಭೇಟಿ ನೀಡಿದ್ದು, ವಿಶೇಷವಾಗಿತ್ತು.