ಉಳ್ಳವರಿಗಷ್ಟೇ ನಂಜುಡೇಶ್ವರ ದರ್ಶನ ಭಾಗ್ಯ: ಹಣವಿದ್ದವರಿಗೆ ಕಳ್ಳದಾರಿಯಲ್ಲಿ ದೇವರ ಭಾಗ್ಯ
ಮೈಸೂರು: ಉಳ್ಳವರಿಗೆ ನಂಜುಂಡೇಶ್ವರನ ಸನ್ನಿಧಿಯಲ್ಲಿ ದೇವರ ದರುಶನ, ಇಲ್ಲದವರಿಗೆ ಭ್ರಮನಿರಸನವಾಗುತ್ತಿರುವ ಪ್ರಸಂಗ ನಂಜನಗೂಡು ನಂಜುಂಡೇಶ್ವರನ ದೇವಾಲಯದಲ್ಲಿ ನಡೆಯುತ್ತಿದೆ.
ಹಣವಿದ್ದರೆ ನಂಜುಂಡನ ದರುಶನ ಭಾಗ್ಯ, ಇಲ್ಲದವರಿಗೆ ಕಾನೂನಿನ ತಡೆ. ದೇವಾಲಯದಲ್ಲಿ ಅರ್ಚಕರು ರಾಜಕೀಯ ಮಾಡುತ್ತಿದ್ದಾರೆ. ಲಾಕ್ ಡೌನ್ ಹಿನ್ನಲೆ ದೇವಸ್ಥಾನಕ್ಕೆ ಪ್ರವೇಶ ನಿರ್ಭಂದಿಸಿದ್ದರೂ, ಅರ್ಚಕರ ಜೇಬಿಗೆ ದುಡ್ಡು ಇಳಿದ್ರೆ ಪ್ರವೇಶ ಹಾಗೂ ನಂಜುಂಡೇಶ್ವರನ ದರ್ಶನ ಸಿಗುತ್ತಿದೆ. ನಾಳೆ ಸೋಮವಾರ ದೇವಾಲಯಗಳು ರೀ ಓಪನ್, ಆದ್ರೆ , ಈ ಕಂಡೀಷನ್ ನಂಜನಗೂಡು ದೇವಾಲಯಕ್ಕಿಲ್ಲವಾಗಿದೆ. ಕದ್ದುಮುಚ್ಚಿ ಶ್ರೀಮಂತ ಭಕ್ತರನ್ನ ಕರೆದೊಯ್ಯುಯ್ದು ಪೂಜೆ ಮಾಡಿಸಲಾಗುತ್ತಿದೆ. ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಚರ್ಚೆ ಆರಂಭವಾಗಿದೆ.
ರಾಜಾರೋಷವಾಗಿ ನಡೆದ್ರೂ ಆಡಳಿತ ಮಂಡಳಿ ಮಾತ್ರ ಸೈಲೆಂಟ್ ಆಗಿದ್ದು, ಅಧಿಕಾರಿಗಳು ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ. ಸಾರ್ವಜನಿಕರು ತಿರುಗಿ ಬೀಳುವ ಮುನ್ನ ಮುಜರಾಯಿ ಇಲಾಖೆ ಎಚ್ಚೆತ್ತುಕೊಳ್ಳಬೇಕಿದೆ.