ಪೊಲೀಸರಿಗೆ ಕೊರೋನಾ: ಹಿರಿಯ ಅಧಿಕಾರಿಗಳಲ್ಲಿ ಹೆಚ್ಚಾದ ಆತಂಕ
1 min readಬಳ್ಳಾರಿ: ಮೂವರು ಪೊಲೀಸರಿಗೆ ಕೊರೋನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ರಾಜ್ಯದ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಸೇರಿ 40 ಪೊಲೀಸ್ ಅಧಿಕಾರಿಗಳಲ್ಲಿ ಆತಂಕ ಮೂಡಿದೆ.
ಬಳ್ಳಾರಿ ಜಿಲ್ಲೆಯ ಹೊಸಪೇಟೆಯ ಮೂರು ಜನ ಪೊಲೀಸರಿಗೆ ನಿನ್ನೆ ರಾತ್ರಿ ಕೊರೋನಾ ಪಾಸಿಟಿವ್ ಬಂದಿದೆ. ಒಬ್ಬ ಸಿಪಿಐ, ಇಬ್ಬರು ಪೇದೆಗೆ ಸೋಂಕು ತಗುಲಿದೆ.
ಕರೊನಾ ಪಾಸಿಟಿವ್ ಬಂದ ಸಿಪಿಐನಿಂದ ಎದುರಾಗುತ್ತಾ DG& IGP ಕ್ವಾರೆಂಟೆನ್
ಇಂತಹದೊಂದು ಪ್ರಶ್ನೆ ಮೂಡೋಕೆ ಕಾರಣವಾಗಿದ್ದು ಶುಕ್ರವಾರ ಪ್ರವೀಣ್ ಸೂದ್ ಬಳ್ಳಾರಿಯಲ್ಲಿ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ್ದು. ಈ ಸಭೆಯಲ್ಲಿ ನಿನ್ನೆ ಪಾಸಿಟಿವ್ ಬಂದ ಸಿಪಿಐ ಕೂಡ ಭಾಗಿಯಾಗಿರುವ ಶಂಕೆ. ಸಭೆಯಲ್ಲಿ ಬಳ್ಳಾರಿ ಜಿಲ್ಲೆಯ 40 ಕ್ಕೂ ಹೆಚ್ಚು ಜನ ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದರು. ಬಳ್ಳಾರಿಯ ಪೊಲೀಸ್ ಜಿಮಖಾನಾದಲ್ಲಿ ಸಭೆ ನಡೆಸಿದ್ದ ಪ್ರವೀಣ್ ಸೂದ್.ಸಭೆಯ ಬಳಿಕ ಖಾಸಗಿ ಹೊಟೇಲ್ ಒಂದ್ರಲ್ಲಿ ಎಲ್ಲಾ ಪೊಲೀಸ್ ಅಧಿಕಾರಿಗಳ ಜತೆ ಊಟ ಮಾಡಿದ್ದರು. ಒಬ್ಬ ಸಿಪಿಐ ನಿಂದ ಜಿಲ್ಲೆಯ ಎಸ್ಪಿ, ಎಎಸ್ಪಿ, ಸಿಪಿಐಗಳು, ಡಿವೈಎಸ್ಪಿ ಗಳಿಗೂ ಎದುರಾಗಿದೆ ಆತಂಕ. ಸಭೆಯಲ್ಲಿ ಪಾಲ್ಗೊಂಡ ಸೋಂಕಿತರ ಹಿಂದೆ ಮುಂದೆ ಎಡ ಹಾಗೂ ಬಲ ಇದ್ದೋರನ್ನ ಮಾತ್ರ ಕ್ವಾರಂಟೇನ್ ಮಾಡಲು ಜಿಲ್ಲಾಡಳಿತ ಕ್ರಮ. ಯಾವುದೇ ಪೊಲೀಸ್ ಸ್ಟೇಷನ್ ನ್ನ ಸೀಲ್ ಮಾಡಲು ಸಾಧ್ಯವಿಲ್ಲ. ಒಟ್ಟು ಪ್ರಥಮ ಸಂಪರ್ಕ ಹೊಂದಿದ 39 ಜನರನ್ನ ಕ್ವಾರಂಟೇನ್ ಮಾಡ್ಲಾಗಿದೆ ಎಂದು ಜಿಲ್ಲಾಧಿಕಾರಿ SS ನಕುಲ್ ಸ್ಪಷ್ಟನೆ ನೀಡಿದ್ದಾರೆ.