ಏಳುಕೋಟಿ ಮೈಲಾರಲಿಂಗೇಶ್ವರ ದರ್ಶನ ಭಾಗ್ಯವಿಲ್ಲ: ಗ್ರಾಮಸ್ಥರಿಂದಲೇ ಮನವಿ
ಹಾವೇರಿ: ಬಳ್ಳಾರಿ ಜಿಲ್ಲೆ ಹೂವಿನ ಹಡಗಲಿ ತಾಲೂಕಿನ ಶ್ರೀ ಕ್ಷೇತ್ರ ಮೈಲಾರಲಿಂಗೇಶ್ವರನ ದೇವಸ್ಥಾನ ಬಾಗಿಲು ತೆರೆಯಬಾರದೆಂದು ಸ್ಥಳಿಯ ಭಕ್ತರು ಮತ್ತು ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದಾರೆ.
ಜೂನ್ 8 ರಿಂದ ದೇವಸ್ಥಾನದ ಬಾಗಿಲು ಓಪನ್ ಮಾಡಲು ರಾಜ್ಯ ಸರ್ಕಾರದ ಗ್ರೀನ್ ಸಿಗ್ನಲ್ ಸಿಕ್ಕರೂ ಸ್ಥಳೀಯರು ಬಾಗಿಲು ಓಪನ್ ಮಾಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಪ್ರತಿ ವರ್ಷ ಕಾರ್ಣಿಕ ನುಡಿಯಿಂದ ಜಗತ್ ಪ್ರಸಿದ್ದಿಯಾದ ಮೈಲಾರ ಲಿಂಗಯ್ಯನ ದರ್ಶನದಲ್ಲಿ ಏರುಪೇರಾಗಿದೆ. ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೋನ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿವರುವ ಹಿನ್ನೆಲೆಯಲ್ಲಿ ಜೂನ್ 30 ರ ವರಗೆ ದೇವಸ್ಥಾನದ ಬಾಗಿಲು ಓಪನ್ ಮಾಡಬೇಡಿ ಎಂದು ಹೂವಿನ ಹಡಗಲಿ ತಾಲೂಕಿನ ದಂಡಾಧಿಕಾರಿ ಮತ್ತು ಮೈಲಾರಲಿಂಗೇಶ್ವರ ದೇವಸ್ಥಾನದ ಧರ್ಮದರ್ಶಿಗಳಿಗೆ ಮನವಿ ಮಾಡಿದ್ದಾರೆ.
ರಾಜ್ಯದ ನಾನಾ ಜಿಲ್ಲೆಗಳಿಂದ ನಿತ್ಯ ಸಾವಿರಾರು ಭಕ್ತರು ಸ್ವಾಮಿಯ ದರ್ಶನಕ್ಕೆ ಬರುತ್ತಾರೆ. ಹೀಗಾಗಿ ಸೋಕು ಹೆಚ್ಚಾಗುವ ಸಾಧ್ಯತೆಯಿದೆ. ಸಧ್ಯ ದೇವಸ್ಥಾನ ಬಾಗಿಲು ಓಪನ್ ಮಾಡುವುದು ಬೇಡ ಎಂದು ಭಕ್ತರ ಮನವಿಗೆ ಮನವಿಗೆ ಧರ್ಮದರ್ಶಿ ವೆಂಕಪಯ್ಯ ಒಡೆಯರ್ ಸ್ಪಂಧಿಸಿ, ಜಿಲ್ಲಾಧಿಕಾರಿ ಗಳಿಗೆ ಪತ್ರ ಬರೆದು ಜೂನ್ 30 ನಂತರ ಅವಕಾಶಕ್ಕಾಗಿ ಮನವಿ ಮಾಡಿಕೊಂಡಿದ್ದಾರೆ.