ಮುರುಗೇಶ ನಿರಾಣಿಗೇಕೆ ಮಂಡ್ಯದ ಸಕ್ಕರೆ ಪ್ಯಾಕ್ಟರಿ: ಸರ್ವೀಸ್ ಮಾಡಬೇಕಂತಾರೆ ಮಾಜಿ ಸಚಿವರು
ಮಂಡ್ಯ: PSSK ಶುಕ್ರವಾರ ಸಿಂಗಲ್ ಬೀಟ್ ಆಗಿದೆ. 4 ವರ್ಷದಿಂದ ನಿಂತಿರುವ ಕಾರ್ಖಾನೆ, ಸರ್ವೀಸ್ ಮಾಡಬೇಕು. 40 ವರ್ಷದ ಅವಧಿಗೆ ಗುತ್ತಿಗೆ ಆಧಾರದ ಮೇಲೆ ನೀಡಿದ್ದಾರೆ. ಕಾರ್ಖಾನೆಯನ್ನ ಖರೀದಿ ಮಾಡ್ತಿಲ್ಲಾ 40 ವರ್ಷಕ್ಕೆ ಗುತ್ತಿಗೆ ನೀಡಿದ್ದಾರೆ ಎಂದು ಮಾಜಿ ಸಚಿವ ಮುರುಗೇಶ ನಿರಾಣಿ ಹೇಳಿದರು.
ಈಗೀರುವ ಕಾರ್ಖಾನೆ 3500 ಟನ್ ಕಬ್ಬು ಅರೆಯುವ ಸಾಮರ್ಥ್ಯ ಹೊಂದಿದೆ. ಬರುವ 5 ವರ್ಷದ ಒಳಗಾಗಿ ಕಾರ್ಖಾನೆಯಲ್ಲಿ 5 ಸಾವಿರ ಟನ್ ಕಬ್ಬು ಅರೆಯಲು ವಿಸ್ತರಣೆ ಮಾಡಬೇಕಿದೆ. ಈಗ 5 ಮೆಗಾವ್ಯಾಟ್ ವಿದ್ಯುತ್ ಇದ್ದು, 20 ಮೆಗಾವ್ಯಾಟ್ ವಿದ್ಯುತ್ ಪೂರೈಕೆ ಮಾಡಬೇಕು. 5 ವರ್ಷದ ಅವದಿಯಲ್ಲಿ 60 ಸಾವಿರ ಲೀ ಎಥೆನಾಲ್ ತಯಾರು ಮಾಡುವ ಘಟಕ ಸ್ಥಾಪನೆ ಮಾಡಲಾಗುವುದೆಂದರು.
ಸರ್ಕಾರದಿಂದ ಷರತ್ತು ವಿಧಿಸಿ ಗುತ್ತಿಗೆ ನೀಡಿದ್ದಾರೆ. ಕಾರ್ಖಾನೆಯಲ್ಲಿರುವ ಕಾರ್ಮಿಕರ ನೇಮಕದ ಬಗ್ಗೆ ಎಲ್ಲಾ ಕಾರ್ಮಿಕರನ್ನ ಕರೆದು ಅವರ ಅಭಿಪ್ರಾಯ ಪಡೆದು ನಿರ್ಧಾರ ತೆಗೆದುಕೊಳ್ಳುತ್ತೇನೆ. ರೈತರು ಕಷ್ಟದಲ್ಲಿದ್ದಾರೆ ಬೇಗ ಅವಕಾಶ ಕೊಟ್ಟರೆ ಬೇಗ ಪ್ರಾರಂಭಿಸಲಾಗುತ್ತೆ ಎಂದು ನಿರಾಣಿ ಹೇಳಿದರು.