Posts Slider

Karnataka Voice

Latest Kannada News

ಮಂತ್ರಿಯಾಗಬೇಕಿದ್ದ ಶಾಸಕ ಡೆಡ್ಲಿ ಕೊರೋನಾಗೆ ಬಲಿ: ಬರ್ತಡೇ ದಿನವೇ ಸಾವನ್ನಪ್ಪಿದ ಶಾಸಕ

1 min read
Spread the love

ತಮಿಳುನಾಡು: ಸತತ ಮೂರು ಬಾರಿ ಗೆದ್ದು ಶಾಸಕರಾಗಿದ್ದ ಡಿಎಂಕೆ ಶಾಸಕ ತಮ್ಮ ಹುಟ್ಟುಹಬ್ಬದ ದಿನವೇ ಡೆಡ್ಲಿ ಕೊರೋನಾಗೆ ಬಲಿಯಾದ ಘಟನೆ ಇಂದು ನಡೆದಿದೆ.

ದೇಶದಲ್ಲಿ ಮೊದಲ ಬಾರಿ 61ವರ್ಷದ ಅನ್ಬಗಳನ್ ಮೃತಪಟ್ಟಿದ್ದು, ಜೂನ್ 3ರಂದು ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಚೆಪಾಕ್ ವಿಧಾನಸಭಾ ಕ್ಷೇತ್ರದ ಅನ್ಬಗಳನ್ ಚಲನಚಿತ್ರ ನಿರ್ಮಾಪಕ ಮತ್ತುವಿತರಕರಾಗಿಯೂ ಕಾರ್ಯನಿರ್ವಹಣೆ ಮಾಡುತ್ತಿದ್ದರು. ಇಂದು ಅವರ 62ನೇ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳಬೇಕಿತ್ತು. ಆದರೆ, ಅವರ ಸಾವು ಇಂದೇ ಸಂಭವಿಸಿದೆ.

ಕೊರೋನಾ ವೈರಸ್ ಸಮಯದಲ್ಲೂ ನಿರಂತರವಾಗಿ ಸೇವೆ ಮಾಡುತ್ತಿದ್ದರು. ಅದೇ ಸಮಯದಲ್ಲಿ ಅವರಿಗೆ ಈ ಸೋಂಕು ತಗುಲಿರುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಡಿಎಂಕೆ ಪಕ್ಷದಲ್ಲಿ ಮುಂದಿನ ಮಂತ್ರಿ ಎಂದು ಬಿಂಬಿಸಲಾಗಿತ್ತು.


Spread the love

Leave a Reply

Your email address will not be published. Required fields are marked *