SSLC ಪರೀಕ್ಷೆ ನಡೆಸಲು ಹೊರಟ್ಟಿ ಬೆಂಬಲ: ರದ್ದು ಮಾಡುವುದು ಬೇಡವೆಂದ ಮಾಸ್ತರ್

ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸಬೇಕಾಗುತ್ತದೆ. ಬೇರೆ ರಾಜ್ಯಗಳಲ್ಲಿ ಪರೀಕ್ಷೆ ರದ್ದು ಮಾಡಲಾಗಿದೆ. ಅಲ್ಲಿ ಮೂರು ಹಂತದ ಶಿಕ್ಷಣ ಪದ್ಧತಿ ಜಾರಿಗೆ ತರಲಾಗಿದೆ. ಹೀಗಾಗಿ ಅವರಿಗೆ 10ನೇ ತರಗತಿ ಪರೀಕ್ಷೆ ಅವರಿಗೆ ಕಡ್ಡಾಯವಲ್ಲ. ಆದರೆ ನಮ್ಮ ರಾಜ್ಯದ ಶಿಕ್ಷಣ ವ್ಯವಸ್ಥೆ ಬೇರೆ ಇದೆ. ಈಗ ಪರೀಕ್ಷೆ ನಡೆಸದಿದ್ದರೆ ಮುಂದೆ ಸಮಸ್ಯೆಗಳಾಗುತ್ತವೆ ಎಂದು ಮಾಜಿ ಶಿಕ್ಷಣ ಸಚಿವ ಬಸವರಾಜ ಹೊರಟ್ಟಿ ಹೇಳಿದರು.
ಮುಂದಿನ ಪಿಯುಸಿ, ಉದ್ಯೋಗಕ್ಕೆ ಹೋಗಲು ತೊಂದರೆ ಆಗುತ್ತದೆ. ಆಂಗ್ಲ ಮಾಧ್ಯಮಕ್ಕೆ ಸೇರಿಸಿದ 90% ಪೋಷಕರು ಬಡವರಿಲ್ಲ. ಆಂಗ್ಲ ಮಾಧ್ಯಮ ಬಯಸಿದ ಶ್ರೀಮಂತರು ಫೀಸು ಕಟ್ಟಲಿ. ಆದರೆ ಆದ್ಯತೆ ಮೇರೆಗೆ ಬಡವರಿಗೆ ವಿನಾಯಿತಿ ಕೊಡಬೇಕು. ಆರ್‌ಟಿಇ ಅಡಿಯ ಹಣ ಬಿಡುಗಡೆ ಮಾಡಬೇಕು. ಮಕ್ಕಳಲ್ಲಿ, ಪಾಲಕರಲ್ಲಿ ಗೊಂದಲ ಮೂಡಿಸಬಾರದು ಎಂದರು.