Posts Slider

Karnataka Voice

Latest Kannada News

ಶತಕ ಬಾರಿಸಿದ ಧಾರವಾಡ ಜಿಲ್ಲೆಯ ಪಾಸಿಟಿವ್ ಪ್ರಕರಣ: ಸತ್ತವರ ಸಂಖ್ಯೆ 2ಕ್ಕೇರಿಕೆ

Spread the love

ಧಾರವಾಡ: ಜಿಲ್ಲೆಯಲ್ಲಿ ಮತ್ತೆ  20  ಕೋವಿಡ್ ಪಾಸಿಟಿವ್ ಪ್ರಕರಣಗಳು   ಪತ್ತೆಯಾಗಿವೆ  ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ.

DWD 92  –  ಪಿ-  6520   (04  ವರ್ಷ , ಬಾಲಕ )    ಇವರು ಕುಂದಗೋಳ ತಾಲೂಕಿನ ತರ್ಲಘಟ್ಟ ನಿವಾಸಿ, ಪಿ- 5969 ಸಂಪರ್ಕದಿಂದ ಸೋಂಕು ಬಂದಿದೆ.

DWD – 93  ಪಿ- 6521  ( 48   ವರ್ಷ ,ಮಹಿಳೆ ) ನವಲಗುಂದ ತಾಲೂಕಿನ ಮೊರಬ ಗ್ರಾಮದವರು, ಪಿ- 6222 ಸಂಪರ್ಕದಿಂದ ಸೋಂಕು ಬಂದಿದೆ.

DWD – 94  ಪಿ- 6522   ( 29   ವರ್ಷ ,ಮಹಿಳೆ   )  ನವದೆಹಲಿಯಿಂದ ನವಲಗುಂದ ತಾಲೂಕಿನ ಮೊರಬ ಗ್ರಾಮಕ್ಕೆ ಆಗಮಿಸಿದ ಪ್ರಯಾಣ ಹಿನ್ನೆಲೆ ಹೊಂದಿದ್ದಾರೆ.

DWD – 96  ಪಿ- 6524 ( 10 ವರ್ಷ ,ಮಹಿಳೆ )   , DWD -97 ಪಿ-6525 ( 28 ವರ್ಷ, ಮಹಿಳೆ  ) , DWD -98 ಪಿ- 6526 ( 23 ವರ್ಷ ,ಪುರುಷ) ಈ ಮೂವರು ಅಣ್ಣಿಗೇರಿ ನಿವಾಸಿಗಳು, ಪಿ- 5972 ಅವರೊಂದಿಗೆ ಸಂಪರ್ಕ ಹೊಂದಿದ್ದರು.

DWD – 99 ಪಿ- 6527  ( 34 ವರ್ಷ ,ಪುರುಷ ), DWD-100  ಪಿ-6528( 33 ವರ್ಷ, ಪುರುಷ), DWD -101-ಪಿ- 6529 ( 11 ವರ್ಷ,ಪುರುಷ) ,DWD -102 ಪಿ- 6530 (31 ವರ್ಷ ,ಮಹಿಳೆ), DWD -103 ಪಿ- 6531 ( 58 ವರ್ಷ,ಮಹಿಳೆ) ಈ ಐದು ಜನರು ಕಲಘಟಗಿ ತಾಲ್ಲೂಕು ದೇವಿಕೊಪ್ಪ ನಿವಾಸಿಗಳು, ಪಿ-5828 ಅವರ ಸಂಪರ್ಕ ಹೊಂದಿದ್ದರು.

DWD – 104  ಪಿ- 6532  ( 27  ವರ್ಷ ,ಪುರುಷ )   ಮಹಾರಾಷ್ಟ್ರ ರಾಜ್ಯದ ಪ್ರಯಾಣ ಹಿನ್ನೆಲೆ ಹೊಂದಿದ್ದಾರೆ. ಸಾಂಸ್ಥಿಕ ಕ್ವಾರಂಟೈನ್ ನಲ್ಲಿದ್ದರು.

DWD – 105  ಪಿ- 6533 ( 02 ವರ್ಷ, ಗಂಡುಮಗು )  ,DWD – 106  ಪಿ- 6534  ( 05 ವರ್ಷ , ಬಾಲಕಿ)   ,DWD 107 – ಪಿ-6535  (31 ವರ್ಷ, ಮಹಿಳೆ) ,

DWD-108 – ಪಿ-6536  ( 20 ವರ್ಷ , ಪುರುಷ)  ,  DWD 109 ಪಿ-6537 ( 19 ವರ್ಷ, ಪುರುಷ) , DWD 110 ಪಿ-6538 ( 44 ವರ್ಷ , ಮಹಿಳೆ) , DWD 111 ಪಿ- 6539 ( 46 ವರ್ಷ , ಪುರುಷ) ಈ ಏಳು ಜನರು ಹುಬ್ಬಳ್ಳಿ ಉಣಕಲ್ ನಿವಾಸಿಗಳು  ಪಿ- 6257  ಅವರೊಂದಿಗೆ ಸಂಪರ್ಕ ಹೊಂದಿದ್ದರು.

ಇಬ್ಬರು  ಗುಣಮುಖ ಬಿಡುಗಡೆ

ಕೋವಿಡ್ ನಿಂದ ಗುಣಮುಖವಾಗಿರುವ ಹುಬ್ಬಳ್ಳಿ ಕೇಶ್ವಾಪುರ ಶಾಂತಿನಗರ ವಿನಯ ಕಾಲನಿ ನಿವಾಸಿಗಳಾದ  ಪಿ -5005 ( 54  ವರ್ಷ,ಮಹಿಳೆ ) ಹಾಗೂ ಪಿ-5006  ( 36  ವರ್ಷ ,ಪುರುಷ)  ಇಂದು  ಜೂನ್ 13  ರಂದು ಹುಬ್ಬಳ್ಳಿ ಕಿಮ್ಸ್ ನಿಂದ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ  111 ಕ್ಕೆ ಏರಿಕೆಯಾಗಿದೆ. ಈಗಾಗಲೇ  50      ಜನ ಗುಣಮುಖರಾಗಿ ಆಸ್ಪತ್ರೆಯಿಂದ  ಬಿಡುಗಡೆಯಾಗಿದ್ದಾರೆ . ಉಳಿದವರು  ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೋವಿಡ್ ಸೋಂಕು ಹಾಗೂ ಕಿಡ್ನಿ ಸಮಸ್ಯೆ ಓರ್ವ ವ್ಯಕ್ತಿ ಸಾವು

ಕೋವಿಡ್ ಸೋಂಕು ದೃಢಪಟ್ಟು ಹುಬ್ಬಳ್ಳಿ ಕಿಮ್ಸ್ ಗೆ ದಾಖಲಾಗಿದ್ದ  ಪಿ-6258 ( 70  ವರ್ಷ , ಪುರುಷ ) ಜೂನ್ 12  ರಂದು ರಾತ್ರಿ ಮೃತಪಟ್ಟಿದ್ದಾರೆ. ಮಹಾರಾಷ್ಟ್ರ ರಾಜ್ಯದ ಪ್ರವಾಸ ಹಿನ್ನೆಲೆ ಹೊಂದಿದ್ದ ಇವರಲ್ಲಿ ಕೋವಿಡ್ ಪಾಸಿಟಿವ್ ಜೊತೆಗೆ ತೀವ್ರ ಉಸಿರಾಟದ ತೊಂದರೆ , ಅಸ್ತಮಾ, ಕಿಡ್ನಿ  ಮತ್ತಿತರ  ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಿದ್ದವು. ಮೃತರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ  ಹುಬ್ಬಳ್ಳಿಯ ಗವಿಮೊಹಲ್ಲಾ ಖಬ್ರಸ್ತಾನ್ ದಲ್ಲಿ  ಜರುಗಿತು.


Spread the love

Leave a Reply

Your email address will not be published. Required fields are marked *