ಶ್ರೀಮಂತರ ಪರವಾಗಿ ಕಾಯ್ದೆ ತರುತ್ತಿರುವ ಬಿಜೆಪಿ: ಸಿದ್ಧರಾಮಯ್ಯ ಟೀಕೆ

ಬೆಂಗಳೂರು: ಭೂ ಸುಧಾರಣಾ ಕಾಯ್ದೆಗೆ ಕೆಲ ತಿದ್ದುಪಡಿ ತರಲು ಸರ್ಕಾರ ಹೊರಟಿದೆ. ಊಳುವವನೇ ಭೂಮಿಯ ಒಡೆಯ ಅನ್ನೋ ಸ್ಲೋಗನ್ ಮಾಡಿ ದೇವರಾಜ ಅಸರು ಜಾರಿ ಮಾಡಿದ್ರು. ಈಗ ಉಳ್ಳವರೇ ಭೂಮಿ ಒಡೆಯ ಅಂತಾ ಬಿಜೆಪಿ ಸರ್ಕಾರ ಮಾಡಲು ಹೊರಟಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ.
ಕೋರ್ಟ್ ನಲ್ಲಿ ಕೇಸ್ ಇದ್ರೆ ಅವನ್ನು ವಜಾ ಮಾಡಲು ಹೊರಟಿದ್ದಾರೆ. ಕಾರ್ಪೋರೇಟ್ ಗಳಿಗೆ, ಶ್ರೀಮಂತರಿಗೆ, ಬಂಡವಾಳ ಶಾಹಿಗಳಿಗೆ ಭೂಮಿ ಕೊಡುವ ಹುನ್ನಾರ ಸರ್ಕಾರದ್ದು ಎಂದು ಆರೋಪಿಸಿದರು.
ಈ ಹಿಂದೆ ಊಳುವವನೇ ಭೂಮಿ ಒಡೆಯ ಎಂಬ ಕಾನೂನು ಬಲವಾಗಿತ್ತು. ಈಗ ಭೂ ಸುಧಾರಣಾ ಕಾಯಿದೆಗೆ ತಿದ್ದುಪಡಿ ತಂದಿರುವ ಹಿನ್ನೆಲೆಯಲ್ಲಿ ಉಳ್ಳವನೇ ಭೂಮಿ ಒಡೆಯ ಎಂದಾಗಿದೆ. ನೆಗಡಿ ಬಂದರೆ ಮೂಗನ್ನೇ ಕತ್ತರಿಸಕ್ಕೆ ಆಗುತ್ತಾ..?. ಕಾಲಿಗೆ ಗಾಯ ಆದರೆ ಕಾಲನ್ನೇ ಕತ್ತರಿಸಲು ಆಗುತ್ತಾ..?. ಕಾಯಿದೆಯಲ್ಲಿ ನ್ಯೂನತೆ ಇದ್ದರೆ ಅದನ್ನು ಮಾತ್ರ ತಿದ್ದುಪಡಿ ತಂದು ಸರಿ ಮಾಡಬೇಕು. ಅದನ್ನು ಬಿಟ್ಟು ರೈತರ ಭೂಮಿಯನ್ನೇ ಮಾರಾಟಕ್ಕೆ ಇಟ್ಟರೆ ಹೇಗೆ..? ಇದನ್ನು ನಾವು ತೀವ್ರವಾಗಿ ವಿರೋಧ ಮಾಡ್ತೀವಿ ಎಂದರು.
ಇವತ್ತಿನ ಸಭೆ ಅಪೂರ್ಣ ಆಗಿದೆ. ಮುಂಬರುವ ದಿನಗಳಲ್ಲಿ ಈ ಬಗ್ಗೆ ವ್ಯಾಪಕ ಚರ್ಚೆ ನಡೆಸಿ ಹೋರಾಟದ ಸ್ಪಷ್ಟ ರೂಪುರೇಷೆ ನಿರ್ಧಾರ ಮಾಡ್ತೀವಿ ಎಂದು ಸಿದ್ಧರಾಮಯ್ಯ ಹೇಳಿದರು.