ಸಕ್ಕರೆ ನಾಡಿಗೆ ಕರಾಳ ಭಾನುವಾರ: ಒಂದೇ ದಿನ ಮೂರು ಕೆರೆಯಲ್ಲಿ ಏಳು ಜನರ ದುರ್ಮರಣ: ಸಿಎಂರಿಂದ ಇಬ್ಬರಿಗೆ ಐದು ಲಕ್ಷ-ಐವರಿಗೆ 2ಲಕ್ಷ ಪರಿಹಾರ
ಮಂಡ್ಯ: ಜಿಲ್ಲೆಯ ಮೂರು ಕೆರೆಗಳಲ್ಲಿ ಏಳು ಸಾವನ್ನಪ್ಪಿರುವ ಘಟನೆ ನಡೆದಿದ್ದು, ಜಿಲ್ಲೆಗಿಂದು ಕರಾಳ ಭಾನುವಾರವಾಗಿ ಮಾರ್ಪಟ್ಟಿತ್ತು.
ನಾಗಮಂಗಲ ತಾಲೂಕಿನ ಯಲದಹಳ್ಳಿ ಗ್ರಾಮದಲ್ಲಿ ಬಟ್ಟೆ ತೊಳೆಯಲು ಹೋಗಿದ್ದ ಇಬ್ಬರು ಸಾವನ್ನಪ್ಪಿದ್ದಾರೆ. ಚೋಳಸಂದ್ರ ಗ್ರಾಮದ ರಶ್ಮಿ ಮತ್ತು ಅಕ್ಕನ ಮಗಳು ಇಂಚರ ಮೃತರು.
ಒಂದೇ ದಿನ ಬೇರೆ ಬೇರೆ ಕೆರೆಯಲ್ಲಿ ಮುಳುಗಿ ಜಿಲ್ಲೆಯ 7 ಜನರ ಸಾವು. ನಾಗಮಂಗಲ ತಾಲೂಕಿನ ಎರಡು ಪ್ರತ್ಯೇಕ ಪ್ರಕರಣದಲ್ಲಿ 5 ಜನರು ಸಾವು. ಕೆ.ಆರ್.ಪೇಟೆ ತಾಲೂಕಿನ ಉಳಿ ಗಂಗನಹಳ್ಳಿ ಪ್ರಕರಣದಲ್ಲಿ 2 ಸಾವು. ನಾಗಮಂಗಲದ ಗ್ರಾಮಾಂತರ ಮತ್ತು ಕಿಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.